ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ನೀವು ಕೈಗೊಳ್ಳುವ ಕೆಲಸಗಳೆಲ್ಲವೂ ಯಶಸ್ವಿಯಾಗಲಿವೆ. ಆರ್ಥಿಕವಾಗಿ ಸಬಲಗೊಳ್ಳಲಿದ್ದೀರಿ. ಆದರೆ ಕೌಟುಂಬಿಕವಾಗಿ ಸಂಗಾತಿಯೊಂದಿಗೆ ಹೊಂದಾಣಿಕೆ ನಡೆಸಬೇಕಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆಯಾಗುವುದು.
ವೃಷಭ: ಇಷ್ಟದೇವರ ಪ್ರಾರ್ಥನೆಯೊಂದಿಗೆ ಇಂದಿನ ದಿನದಾರಂಭ ಮಾಡುವುದರಿಂದ ಎಲ್ಲವೂ ಶುಭವಾಗಲಿದೆ. ವೈಯಕ್ತಿಕ ಜೀವನದಲ್ಲಿ ಮಹತ್ತರ ಹೆಜ್ಜೆಯಿಡಲಿದ್ದೀರಿ. ಆರ್ಥಿಕವಾಗಿ ಅಡಚಣೆ ಬಂದಾಗ ಮಿತ್ರರ ಸಹಾಯ ದೊರೆಯಲಿದೆ.
ಮಿಥುನ: ಯಾವುದೋ ಕ್ಲಿಷ್ಟಕರ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳಲಿದ್ದೀರಿ. ಯೋಗ್ಯ ವಯಸ್ಕರಿಗೆ ಸೂಕ್ತ ಸಂಗಾತಿಗಾಗಿ ಹುಡುಕಾಟ ತಪ್ಪದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ.
ಕರ್ಕಟಕ: ಪೋಷಕರೊಂದಿಗೆ ಅನಗತ್ಯ ಸಂಘರ್ಷಕ್ಕಿಳಿಯಬೇಡಿ. ಆರ್ಥಿಕವಾಗಿ ಲೆಕ್ಕಾಚಾರ ಸರಿಯಾಗಿರಬೇಕು. ವ್ಯವಹಾರದಲ್ಲಿ ಅಪರಿಚಿತರೊಂದಿಗೆ ಎಚ್ಚರಿಕೆಯಿಂದಿದ್ದರೆ ಉತ್ತಮ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ.
ಸಿಂಹ: ಹೂಡಿಕೆ ವ್ಯವಹಾರದಲ್ಲಿ ಲಾಭ ಗಳಿಸಲಿದ್ದೀರಿ. ಕೆಲವೊಮ್ಮೆ ಸಂಗಾತಿಯ ಅಭಿಪ್ರಾಯಗಳಿಗೂ ಒಪ್ಪಿಗೆ ಕೊಡಬೇಕಾಗುತ್ತದೆ. ರಾಜಕೀಯವಾಗಿ ಸ್ಥಾನ ಮಾನಕ್ಕೆ ಸಂಚಕಾರ ಬಂದೀತು. ತಾಳ್ಮೆ, ಸಂಯಮವಿರಲಿ.
ಕನ್ಯಾ: ದೇಹಾರೋಗ್ಯದಲ್ಲಿ ಇದುವರೆಗೆ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಸಾಲ ಮರುಪಾವತಿ ಚಿಂತೆ ಕಾಡೀತು. ದೂರ ಪ್ರಯಾಣ ಮಾಡಬೇಕಾಗಿ ಬರಲಿದೆ. ಪ್ರೀತಿ-ಪ್ರೇಮ ಸಂಬಂಧಗಳಲ್ಲಿ ಮುನ್ನಡೆ ಕಂಡುಬರಲಿದೆ.
ತುಲಾ: ಆರ್ಥಿಕವಾಗಿ ಲಾಭದಾಯಕ ದಿನಗಳಾಗಿದ್ದು, ನಿಮ್ಮ ಏಳಿಗೆಗೆ ಪೂರಕ ವಾತಾವರಣ ಕಂಡುಬರಲಿದೆ. ಹೊಸ ವ್ಯವಹಾರಗಳಿಗೆ ಕೈ ಹಾಕಲು ಇದು ಸಕಾಲ. ನೆರೆಹೊರೆಯವರೊಂದಿಗೆ ಸಂಬಂಧ ಸುಧಾರಿಸಲಿದೆ. ಚಿಂತೆ ಬೇಡ.
ವೃಶ್ಚಿಕ: ಮನಸ್ಸಿನಲ್ಲಿ ಅಂದುಕೊಂಡ ಕೆಲಸಗಳನ್ನು ಕಾರ್ಯರೂಪಕ್ಕೆ ತರಲು ಒದ್ದಾಡಬೇಕಾದೀತು. ಕುಲದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.
ಧನು: ಪರ ದೂಷಣೆ ಮಾಡುತ್ತಾ ಕೂರುವುದರಲ್ಲಿ ನಿಮ್ಮ ಸಮಯ ಹಾಳಾದೀತೇ ಹೊರತು ಲಾಭವಾಗದು. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗ. ಸನ್ಮಿತ್ರರ ಸಂಘ ನಿಮ್ಮ ಮನಸ್ಸಿನ ದುಃಖ ಕಡಿಮೆ ಮಾಡಲಿದೆ.
ಮಕರ: ವ್ಯವಹಾರದಲ್ಲಿ ಅನುಕೂಲಕರ ವಾತಾವರಣವಿಲ್ಲದಿದ್ದರೂ ಕ್ರಿಯಾತ್ಮಕವಾಗಿ ಯೋಚಿಸಿ ಪರಿಹಾರ ಕಂಡುಕೊಳ್ಳಲಿದ್ದೀರಿ. ಆಸ್ತಿ-ಪಾಸ್ತಿ ವಿಚಾರದಲ್ಲಿ ಹಿರಿಯರ ಮಧ್ಯಸ್ಥಿಕೆಯಂದ ವ್ಯಾಜ್ಯ ಬಗೆಹರಿಸಿಕೊಳ್ಳಲಿದ್ಧೀರಿ.
ಕುಂಭ: ನಿಮ್ಮ ಪ್ರೀತಿ ಪಾತ್ರರನ್ನು ಬಹಳ ದಿನಗಳ ನಂತರ ಭೇಟಿಯಾದ ಸಂತೋಷ ನಿಮಗೆ ಸಿಗುವುದು. ದಾನ ಧರ್ಮಾದಿಗಳ ಬಗ್ಗೆ ಮನಸ್ಸು ಯೋಚನೆ ಮಾಡಲಿದೆ. ಸಂಗಾತಿಯ ವಿತಂಡ ವಾದವನ್ನು ಅಲಕ್ಷಿಸುವುದೇ ಉತ್ತಮ.
ಮೀನ: ವ್ಯಾಪಾರ-ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಆದಾಯ ದ್ವಿಗುಣಗೊಳ್ಳಲಿದೆ. ಆದರೆ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಸರಕಾರಿ ಉದ್ಯೋಗಿಗಳಿಗೆ ಉನ್ನತಿಯ ಯೋಗವಿದೆ. ದೇವತಾ ಪ್ರಾರ್ಥನೆ ಮಾಡಿ.