ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ವೃತ್ತಿರಂಗದಲ್ಲಿ ಹಿತಶತ್ರುಗಳ ಕೈವಾಡದಿಂದ ಸಿಗಬೇಕಾದ ಸ್ಥಾನ ತಪ್ಪಿ ಹೋದೀತು. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಆದರೆ ದುಂದು ವೆಚ್ಚ ಬೇಡ. ಮಕ್ಕಳ ಶಿಕ್ಷಣದಲ್ಲಿ ಉನ್ನತ ಸಾಧನೆಯಿಂದ ಸಂತೋಷ ಸಿಗಲಿದೆ.
ವೃಷಭ: ಸಾಂಸಾರಿಕವಾಗಿ ಜಂಜಾಟಗಳಿಂದ ಕೂಡಿದ ದಿನವಾಗಲಿದೆ. ನಿಮ್ಮ ಕೆಲವೊಂದು ನಿರ್ಧಾರಗಳು ಸಂಗಾತಿಯ ಅಸಮಾಧಾನಕ್ಕೆ ಕಾರಣವಾದೀತು. ಆದಾಯ ಗಳಿಕೆಯಲ್ಲಿ ವೃದ್ಧಿಯಾದರೂ, ಖರ್ಚೂ ಅಷ್ಟೇ ಹೆಚ್ಚಾಗಲಿದೆ.
ಮಿಥುನ: ನೂತನ ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಇದು ಸಕಾಲ. ಸಂಗಾತಿಯ ಮನೋಭಿಲಾಷೆ ಪೂರೈಸಲಿದ್ದೀರಿ. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಲಿದ್ದೀರಿ.
ಕರ್ಕಟಕ: ಧಾರ್ಮಿಕ ಕ್ರಿಯೆಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಹಿರಿಯರ ಮನೋಭಿಲಾಷೆಗಳು ಪೂರ್ತಿಯಾಗಲಿವೆ. ನಿರುದ್ಯೋಗಿಗಳಿಗೆ ತಕ್ಕ ಉದ್ಯೋಗ ಸಿಗದೇ ನಿರಾಸೆಯಾದೀತು. ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ಸಿಂಹ: ಹೆಚ್ಚು ವೇತನ ಪಡೆಯುವ ನಿಮ್ಮ ಕನಸು ನನಸಾಗಲು ಕೆಲವು ದಿನ ಕಾಯಬೇಕಾಗುತ್ತದೆ. ರಾಜಕೀಯ ರಂಗದಲ್ಲಿರುವವರಿಗೆ ಮುಂಗೋಪವೇ ಶತ್ರುವಾದೀತು. ಮಾನಸಿಕವಾಗಿ ಅಸ್ಥಿರತೆ ಕಂಡುಬಂದೀತು. ತಾಳ್ಮೆಯಿರಲಿ.
ಕನ್ಯಾ: ಸಾಂಸಾರಿಕವಾಗಿ ಸುಖವಿದ್ದರೂ ಅನವಶ್ಯಕ ಮಾತುಗಳಿಂದ ಭಿನ್ನಾಭಿಪ್ರಾಯಗಳು ಮೂಡಿಬಂದೀತು. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸುವುದು ಉತ್ತಮ. ಆಸ್ತಿ ವಿವಾದಗಳನ್ನು ಬಗೆಹರಿಸಲು ಹಿರಿಯರ ಸಲಹೆ ಪಡೆಯಿರಿ.
ತುಲಾ: ಕಳೆದು ಹೋಯಿತೆಂದು ಅಂದುಕೊಂಡಿದ್ದ ವಸ್ತುಗಳು ಮರಳಿ ಕೈಸೇರಲಿವೆ. ಮಹಿಳೆಯರಿಗೆ ಚಿನ್ನಾಭರಣ ಕೊಳ್ಳುವ ಯೋಗ ಸದ್ಯದಲ್ಲೇ ಕೂಡಿಬರಲಿದೆ. ಹಣಕಾಸಿನ ಹರಿವಿಗೆ ತೊಂದರೆಯಿರದು. ಕುಲದೇವರ ದೇವಾಲಯ ದರ್ಶನ ಮಾಡಿ.
ವೃಶ್ಚಿಕ: ಚಿಂತಿತ ಕಾರ್ಯಗಳು ಅಂದುಕೊಂಡಂತೆ ನಡೆಯಲು ಕ್ರಿಯಾತ್ಮಕವಾಗಿ ಯೋಚಿಸಬೇಕಾಗುತ್ತದೆ. ಕೆಳ ಹಂತದ ನೌಕರರಿಗೆ ಉದ್ಯೋಗ ಬಡ್ತಿಯ ಪ್ರಯತ್ನಕ್ಕೆ ಫಲ ಸಿಗಲಿದೆ. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆ ಸಿಗುವುದು.
ಧನು: ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಅಸ್ಥಿರತೆ ಕಂಡುಬಂದೀತು. ನಿರುದ್ಯೋಗಿಗಳು ಉದ್ಯೋಗ ಬೇಟೆಗಾಗಿ ದೂರದೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಲಾಭ ಸಿಕ್ಕೀತು. ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ.
ಮಕರ: ಕುಟುಂಬದ ಶ್ರೇಯಸ್ಸಿಗಾಗಿ ಕೆಲವೊಂದು ತ್ಯಾಗ ಮಾಡಬೇಕಾಗಿ ಬರಲಿದೆ. ಇಷ್ಟ ಮಿತ್ರರ ಭೇಟಿಯಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ಕುಂಭ: ಸರಕಾರಿ ವೃತ್ತಿಯವರಿಗೆ ಆಕಸ್ಮಿಕವಾಗಿ ಬಡ್ತಿ ಯೋಗ ಸಿಕ್ಕೀತು. ಪ್ರೇಮಿಗಳಿಗೆ ಶೀಘ್ರವೇ ವೈವಾಹಿಕ ಜೀವನಕ್ಕೆ ಕಾಲಿಡುವ ಯೋಗ. ಆರ್ಥಿಕವಾಗಿ ಆದಾಯ ವೃದ್ಧಿಯಾಗಲಿದ್ದು, ಅಭಿವೃದ್ಧಿ ಕಂಡುಬರಲಿದೆ. ಅನಗತ್ಯ ಚಿಂತೆ ಬೇಡ.
ಮೀನ: ವೃತ್ತಿರಂಗದಲ್ಲಿ ಏನೇ ಕಷ್ಟ-ನಷ್ಟ ಎದುರಾದರೂ ಸಮಚಿತ್ತದಿಂದ ಎದುರಿಸಲು ಕಲಿಯಬೇಕು. ವಿದ್ಯಾರ್ಥಿಗಳು ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ. ವ್ಯಾಪಾರಸ್ಥರಿಗೆ ಹೊಸ ಯೋಜನೆಗಳಿಗೆ ಹೂಡಿಕೆ ಮಾಡಲು ಸಕಾಲ. ಆದರೆ ಅವಸರ ಬೇಡ.