Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 8 ಅಕ್ಟೋಬರ್ 2020 (09:11 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವೈಭವೋಪೇತ ಜೀವನದ ಬಗ್ಗೆ ಆಸೆಯಾಗಲಿದೆ. ಆದರೆ ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ತಲೆದೋರಲಿದೆ. ನಿಮ್ಮ ಕೆಲಸಗಳಿಗೆ ಸಂಗಾತಿಯ ಸಹಕಾರ ಸಿಗಲಿದೆ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಹಿರಿಯರ ಮಾತುಗಳಿಗೆ ಕಿವಿಗೊಡಿ.

ವೃಷಭ: ದೇಹಾರೋಗ್ಯದಲ್ಲಿ ಇದುವರರೆಗೆ ಇದ್ದ ಸಮಸ್ಯೆಗಳು ದೂರವಾಗಲಿದೆ. ನಿಮ್ಮ ಆತ್ಮವಿಶ್ವಾಸವೇ ನಿಮಗೆ ಶ್ರೀರಕ್ಷೆಯಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಸವಾಲುಗಳಿಗೆ ಸಿದ್ಧತೆ ನಡೆಸಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ಮಿಥುನ: ಮಾನಸಿಕವಾಗಿ ಋಣಾತ್ಮಕ ಚಿಂತೆಗಳು ಕಾಡಲಿದ್ದು, ಕೆಲಸದಲ್ಲಿ ನಿರುತ್ಸಾಹ ಕಂಡುಬರಬಹುದು. ಸಂಕಷ್ಟಗಳು ಬಂದಾಗ ಸ್ನೇಹಿತರ ಸಹಾಯ ಪಡೆಯಲಿದ್ದೀರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.

ಕರ್ಕಟಕ: ನಿಮ್ಮ ಸುತ್ತಮುತ್ತಲಿರುವವರ ಬಗ್ಗೆ ಎಚ್ಚರಿಕೆಯಿಂದಿರುವುದು ಉತ್ತಮ. ವೃತ್ತಿರಂಗದಲ್ಲಿ ಉನ್ನತ ಸ್ಥಾನಮಾನಕ್ಕೇರುವ ಭಾಗ್ಯ ಸಿಗಲಿದೆ. ಪಾಲಿಗೆ ಬಂದ ಅವಕಾಶವನ್ನು ಬಳಸಿಕೊಳ್ಳಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಸಿಂಹ: ಮನಸ್ಸಿನ ಉದ್ವೇಗಕ್ಕೆ ಕಡಿವಾಣ ಹಾಕಬೇಕು. ಮಹಿಳೆಯರಿಗೆ ಗೃಹ ಕೃತ್ಯಗಳಿಂದ ಕೊಂಚ ವಿರಾಮ ಸಿಗಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಎದುರಾಗಲಿವೆ. ಮನಸ್ಸಿನ ಮಾತಿನಂತೆ ನಡೆಯಿರಿ.

ಕನ್ಯಾ: ಬೇರೆಯವರ ವಿಚಾರದಲ್ಲಿ ಅನಗತ್ಯವಾಗಿ ಮೂಗು ತೂರಿಸುವ ಅಗತ್ಯವಿಲ್ಲ. ಮಾತು, ವರ್ತನೆಗೆ ಕಡಿವಾಣ ಹಾಕುವುದು ಒಳಿತು. ನಿಮ್ಮ ಪ್ರತಿಭೆಗೆ ತಕ್ಕ ಬೆಲೆ ಸಿಗಲಿದೆ. ವಾಸ ಸ್ಥಳ ಬದಲಾವಣೆಗೆ ಚಿಂತನೆ ನಡೆಸಲಿದ್ದೀರಿ.

ತುಲಾ: ಯಾವುದೇ ಕೆಲಸಕ್ಕೂ ಮೊದಲು ಸಂಗಾತಿಯ ಜತೆಗೆ ಪರಾಮರ್ಶಿಸಿ ಮುನ್ನಡೆಯುವುದು ಒಳಿತು. ಹಿರಿಯರ ದೇಹಾರೋಗ್ಯದಲ್ಲಿ ಏರುಪೇರಾಗಬಹುದು. ಪ್ರೇಮಿಗಳು ಮನೆಯವರ ವಿರೋಧ ಕಟ್ಟಿಕೊಳ್ಳಲಿದ್ದಾರೆ. ತಾಳ್ಮೆಯಿರಲಿ.

ವೃಶ್ಚಿಕ: ಅನಿವಾರ್ಯ ಕೆಲಸಗಳಿಗಾಗಿ ದೂರ ಪ್ರಯಾಣ ಮಾಡಬೇಕಾಗಿ ಬರಲಿದ್ದು, ಪ್ರಯಾಣದಲ್ಲಿ ಕಳ್ಳತನವಾಗದಂತೆ ಎಚ್ಚರಿಕೆಯಿಂದಿರಿ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ.

ಧನು: ಮನಸ್ಸಿನಲ್ಲಿ ಅಂದುಕೊಂಡಿದ್ದ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವಿರಿ. ವಿಘ್ನಗಳು ಬಂದಾಗ ಎದೆಗುಂದದೇ ಮುನ್ನಡೆಯಿರಿ. ಮಹಿಳೆಯರಿಗೆ ತವರಿನ ಸಂಬಂಧಿಕರ ಭೇಟಿ ಯೋಗವಿದೆ. ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿಬರುವುದು.

ಮಕರ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕಾಲೆಳೆಯುವವರು ಇದ್ದೇ ಇರುತ್ತಾರೆ. ಎಲ್ಲವನ್ನೂ ಮೀರಿ ಬೆಳೆಯಲು ಪ್ರಯತ್ನಿಸಬೇಕು. ಅನಗತ್ಯ ಅಪವಾದಗಳು ಕೇಳಿಬಂದೀತು. ತಾಳ್ಮೆಯಿಂದ ನಿಭಾಯಿಸಿ. ಆತುರದ ನಿರ್ಧಾರ ಮಾಡಲು ಹೋಗಬೇಡಿ.

ಕುಂಭ: ಸಂಗಾತಿಯ ಬಹುದಿನಗಳ ಆಸೆ ಈಡೇರಿಸಲಿದ್ದೀರಿ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ ಬರಲಿದೆ. ವ್ಯಾಪಾರ, ವ್ಯವಹಾರದಲ್ಲಿ ಅಭಿವೃದ್ಧಿ ಕಂಡುಬರುವುದು. ಮನೆಯಲ್ಲಿ ಶುಭ ಮಂಗಲ ಕಾರ್ಯಗಳ ಸಿದ್ಧತೆ ನಡೆಸಲಿದ್ದೀರಿ.

ಮೀನ: ಅನಿರೀಕ್ಷಿತ ರೀತಿಯಲ್ಲಿ ನೀವು ಅಂದುಕೊಂಡ ಕೆಲಸ ಕಾರ್ಯಗಳು ನಡೆದು ಹೋಗಲಿವೆ. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಲಿದ್ದೀರಿ. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ಸ್ನೇಹತರೊಂದಿಗೆ ಪ್ರವಾಸ ಮಾಡುವಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ?