Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶಿವನು ಮಲಗಿರುವ ಸ್ಥಿತಿಯಲ್ಲಿರುವ ಏಕೈಕ ದೇವಾಲಯವಿದು!

ಶಿವನು ಮಲಗಿರುವ ಸ್ಥಿತಿಯಲ್ಲಿರುವ ಏಕೈಕ ದೇವಾಲಯವಿದು!
ಬೆಂಗಳೂರು , ಸೋಮವಾರ, 16 ಸೆಪ್ಟಂಬರ್ 2019 (08:36 IST)
ಬೆಂಗಳೂರು: ನಮ್ಮಲ್ಲಿ ಹಲವು ಶಿವ ದೇವಾಲಯಗಳಿವೆ. ಆದರೆ ಶಿವನನ್ನು ಲಿಂಗದ ರೂಪದಲ್ಲಿ ಪೂಜಿಸುವುದನ್ನು ಮಾತ್ರ ನೋಡಿದ್ದೇವೆ. ಆದರೆ ಆಂಧ್ರಪ್ರದೇಶದಲ್ಲಿರುವ ಈ ದೇವಲಾಯದಲ್ಲಿ ಶಿವ ಪಾರ್ವತಿಯ ಮಡಿಲಲ್ಲಿ ಮಲಗಿದ ಸ್ಥಿತಿಯಲ್ಲಿದ್ದಾನೆ.


ಪಲ್ಲಿ ಕೊಂಡೇಶ್ವರ ದೇವಾಲಯದಲ್ಲಿ ಶಿವನು ಪಾರ್ವತಿ ಮಡಿಲಲ್ಲಿ ಮಲಗಿರುವ ರೂಪದಲ್ಲಿ ಕಾಣಸಿಗುತ್ತಾನೆ. ಇಂತಹ ದೇವಾಲಯವಿರುವುದು ದೇಶದಲ್ಲಿ ಇಲ್ಲಿ ಮಾತ್ರ.

ಸಮುದ್ರ ಮಥನದ ಸಂದರ್ಭದಲ್ಲಿ ವಿಷ ಕುಡಿದ ಶ್ರೀಕಂಠ ಪಾರ್ವತಿ ದೇವಿಯೊಂದಿಗೆ ಮರಳಿ ಕೈಲಾಸಕ್ಕೆ ಸಾಗುವಾಗ ಕೊಂಡೇಶ್ವರ ಬಳಿ ಬಂದಾಗ ವಿಷದ ಪ್ರಭಾವದಿಂದಾಗಿ ಶಿವ ಸುಧಾರಿಸಿಕೊಳ್ಳಲು ಇಲ್ಲೇ ಪಾರ್ವತಿಯ ಮಡಿಲಲ್ಲಿ ಮಲಗಿ  ವಿಶ್ರಮಿಸುತ್ತಾನಂತೆ. ಈ ಕಾರಣಕ್ಕೇ ಇದು ಶಿವ ಶಯನ ಕ್ಷೇತ್ರವಾಯಿತು.

ವಿಶೇಷವೆಂದರೆ ಈ ಶಿವನ ಮೂರ್ತಿಗೆ ಅಭಿಷೇಕ ಮಾಡುವ ಸಂಪ್ರದಾಯವಿಲ್ಲ. ವಿಷದ ಪ್ರಭಾವವಿರುವುದರಿಂದ ಅಭಿಷೇಕ ಮಾಡುವುದಿಲ್ಲವಂತೆ. ಬದಲಾಗಿ ಗುಪ್ತ ಸ್ಥಳದಿಂದ ಚಂದನ ತೈಲ ತಂದು ವಿಗ್ರಹಕ್ಕೆ ಲೇಪಿಸಲಾಗುತ್ತದೆ. ಇದರಿಂದ ವಿಷದ ಪ್ರಭಾವ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?