ಬೆಂಗಳೂರು : ಎಲ್ಲರೂ ರಾಶಿಯ ಪ್ರಕಾರ ಹರಳುಗಳನ್ನು ಹಾಕಿಕೊಂಡರೆ ಅದೃಷ್ಟ ಒಲಿಯುತ್ತದೆ ಎಂದು ಹೇಳುತ್ತಾರೆ. ಆದ್ದರಿಂದ ಯಾವ ರಾಶಿಯವರು ಯಾವ ಹರಳನ್ನು ಹಾಕಬೇಕು. ಯಾವ ಬೆರಳಿಗೆ ಹಾಕಬೇಕು ಎಂಬ ವಿವರ ಇಲ್ಲಿದೆ ನೋಡಿ.
ಮೇಷ ರಾಶಿ : ಮೇಷ ರಾಶಿಯವರು ಹವಳ(koral) ವನ್ನು ತೋರು ಬೆರಳು ಅಥವಾ ಕಿರು ಬೆರಳಿಗೆ ಧರಿಸಬೇಕು.. ಅದು 600 ರಿಂದ 1200 ಮಿ.ಗ್ರಾ ತೂಕವಿರಬೇಕು..
ವೃಷಭ ರಾಶಿ : ವೃಷಭ ರಾಶಿಯವರು ವಜ್ರವನ್ನು(diamond) ಕಿರು ಬೆರಳಲ್ಲಿ ಧರಿಸಬೇಕು.. ಅದು 20 – 120 ಮಿ.ಗ್ರಾ. ತೂಕವಿರಬೇಕು
ಮಿಥುನ ರಾಶಿ : ಮಿಥುನ ರಾಶಿಯವರು ಪಚ್ಚೆಯನ್ನು(emerald) ಕೊನೆ ಬೆರಳಿಗೆ (ಕಿರು ಬೆರಳು) ಧರಿಸಬೇಕು.. ಆ ಪಚ್ಚೆಯು 600-800 7ಮಿ.ಗ್ರಾ ತೂಕವಿರಬೇಕು..
ಕಟಕ ರಾಶಿ: ಕಟಕ ರಾಶಿಯವರು ಮುತ್ತನ್ನು(pearl) ತೋರು ಬೆರಳಿಗೆ ಧರಿಸಬೇಕು.. ಅದು 600 ಮಿ.ಗ್ರಾ. ತೂಕವಿರಬೇಕು.
ಸಿಂಹ ರಾಶಿ : ಸಿಂಹ ರಾಶಿಯವರು ಮಾಣಿಕ್ಯ(ruby) ವನ್ನು ಮಧ್ಯದ ಬೆರಳು ಅಥವಾತೋರು ಬೆರಳಿಗೆ ಧರಿಸಬೇಕು.. ಅದು 600 ಮಿ.ಗ್ರಾ ತೂಕವಿರಬೇಕು..
ಕನ್ಯಾ ರಾಶಿ : ಕನ್ಯಾ ರಾಶಿಯವರು ಪಚ್ಚೆಯನ್ನು(emerald) ಕೊನೆ ಬೆರಳಿಗೆ ಧರಿಸಬೇಕು.. ಅದು 600 ರಿಂದ 800 ಮಿ.ಗ್ರಾ. ತೂಕವಿರಬೇಕು..
ತುಲಾ ರಾಶಿ : ತುಲಾ ರಾಶಿಯವರು ವಜ್ರವನ್ನು ( diamond) ಕೊನೆ ಬೆರಳಲ್ಲಿ ಧರಿಸಬೇಕು.. ಅದು 20 ರಿಂದ 120 ಮಿ.ಗ್ರಾ ತೂಕವಿರಬೇಕು..
ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರು ಹವಳವನ್ನು(koral) ತೋರು ಬೆರಳು ಅಥವಾಕಿರು ಬೆರಳಲ್ಲಿ ಧರಿಸಬೇಕು.. ಅದು 600 ರಿಂದ 1200 ಮಿ.ಗ್ರಾ. ತೂಕವಿರಬೇಕು..
ಧನಸ್ಸು ರಾಶಿ : ಧನಸ್ಸು ರಾಶಿಯವರು ಪುಷ್ಯರಾಗವನ್ನು (topaz) ತೋರು ಬೆರಳು ಅಥವಾ ಮದ್ಯದ ಬೆರಳಲ್ಲಿ ಧರಿಸಬೇಕು.. ಅದು 600 ರಿಂದ 1200 ಮಿ ಗ್ರಾ ತೂಕವಿರಬೇಕು..
ಮಕರ ರಾಶಿ. : ಮಕರ ರಾಶಿಯವರು ನೀಲಿಯನ್ನು( sapphire) ಮಧ್ಯದ ಅಥವಾ ಕೊನೆ ಬೆರಳಿಗೆ ಧರಿಸಬೇಕು.. ಅದು 600 ರಿಂದ 800 ಮಿ.ಗ್ರಾ ನಷ್ಟು ತೂಕವಿರಬೇಕು..
ಕುಂಭ ರಾಶಿ : ಕುಂಭ ರಾಶಿಯವರು ನೀಲಿಯನ್ನು (sapphire) ಮಧ್ಯದ ಅಥವಾ ಕೊನೆ ಬೆರಳಿಗೆ ಧರಿಸಬೇಕು.. ಅದು 600 ರಿಂದ 800 ಮಿ.ಗ್ರಾ ನಷ್ಟು ತೂಕವಿರಬೇಕು..
ಮೀನ ರಾಶಿ : ಮೀನ ರಾಶಿಯವರು ಪುಷ್ಯರಾಗವನ್ನು(topaz) ತೋರು ಬೆರಳು ಅಥವಾ ಮದ್ಯದ ಬೆರಳಿಗೆ ಧರಿಸಬೇಕು.. ಅದು 600 ರಿಂದ 1200 ಮಿ ಗ್ರಾ ತೂಕವಿರಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ