ಬೆಂಗಳೂರು : ಬೇವಿನ ಮರದಲ್ಲಿ ಲಕ್ಷ್ಮೀನಾರಾಯಣ ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಆದಕಾರಣ ಬೇವಿನ ಮರ ಕಂಡಾಗ ಹೀಗೆ ಮಾಡಿದರೆ ನಿಮ್ಮ ಇಷ್ಟಾರ್ಥಗಳು ನೇರವೇರುತ್ತದೆ.
ಬುಧವಾರದಂದು ಪೂಜೆ ಮಾಡಿದ ಬಳಿಕ ತಾಮ್ರದ ಚೊಂಬಿನಲ್ಲಿ ಶುದ್ಧವಾದ ನೀರನ್ನು ಹಾಕಿ ಅದಕ್ಕೆ ಅರಶಿನ, ಕುಂಕುಮ, ಜೇನುತುಪ್ಪ, ಬೆಲ್ಲ, ದನಿಯಾ ಪುಡಿ, ಸಕ್ಕರೆ ಹಾಕಿ ಬಳಿಕ ಬೇವಿನ ಮರದ ಬಳಿ ಆ ಚೊಂಬನ್ನು ತೆಗೆದುಕೊಂಡು ಹೋಗಿ ಮರಕ್ಕೆ 11 ಸುತ್ತು ಸುತ್ತಿ ಆ ನೀರನ್ನು ಹಾಕಬೇಕು. ಮರದ ಕೆಳಗಿರುವ ಮಣ್ಣನ್ನು ಹಣೆಗೆ ಹಚ್ಚಿದರೆ ನಿಮ್ಮ ಮೇಲೆ ಲಕ್ಷ್ಮೀನಾರಾಯಣನ ಅನುಗ್ರಹವಾಗುತ್ತದೆ.