Publish Date: Sat, 05 Sep 2020 (08:44 IST)
Updated Date: Sat, 05 Sep 2020 (08:45 IST)
ಬೆಂಗಳೂರು : ಸಮಸ್ಯೆಗಳು ದೂರವಾಗಲಿ ಎಂದು ನಾವು ನವಗ್ರಹಗಳ ಪ್ರದಕ್ಷಿಣೆ ಹಾಕುತ್ತೇವೆ. ಆದರೆ ನವಗ್ರಹಗಳಿಗೆ ಪ್ರದಕ್ಷಿಣೆ ಹಾಕಿದ ಬಳಿಕ ಹೀಗೆ ಮಾಡಿದರೆ ತೊಂದರೆಗೊಳಗಾಗುತ್ತೀರಿ.
ದೇವಸ್ಥಾನದ ಹೊರಾಂಗಣದಲ್ಲಿ ನವಗ್ರಹಗಳನ್ನು ಸ್ಥಾಪಿಸಿರುತ್ತಾರೆ. ಕೆಲವರು ದೇವರ ದರ್ಶನ ಮಾಡುವ ಮುನ್ನ ನವಗ್ರಹಗಳಿಗೆ ಪ್ರದಕ್ಷಿಣೆ ಹಾಕಿ ಬಳಿಕ ಕಾಲು ತೊಳೆದು ಮುಖ್ಯ ದೇವರ ದರ್ಶನ ಪಡೆಯುತ್ತಾರೆ. ಹೀಗೆ ಮಾಡಿದರೆ ನವಗ್ರಹಗಳಿಗೆ ಅಪಚಾರ, ಅವಮಾನ ಮಾಡಿದ್ದಂತೆ. ಇದರಿಂದ ನವಗ್ರಹಗಳ ಕೋಪಕ್ಕೆ ಗುರಿಯಾಗಿ ಮತ್ತಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ.