ಬೆಂಗಳೂರು : ಪ್ರತಿ ವರ್ಷ ಶ್ರಾವಣ ಮಾಸದ ಮೊದಲ ಶುಕ್ರವಾರ ಬರುವ ಹಬ್ಬವೇ ವರಮಹಾಲಕ್ಷ್ಮೀ ವ್ರತ. ಈ ವ್ರತವನ್ನು ಮಾಡುವ ವೇಳೆ ದೇವಿಗೆ ಈ ಹಣ್ಣ ಮತ್ತು ಈ ಬಣ್ಣದ ಹೂಗಳನ್ನು ಅರ್ಪಿಸಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.
ಲಕ್ಷ್ಮೀ ದೇವಿಯ ಪೂಜೆ ಮಾಡುವಾಗ ದಾಳಿಂಬೆ ಹಣ್ಣು, ಕಡಲೆಕಾಳನ್ನು ದೇವರ ಮುಂದೆ ಇಡಲೇಬೇಕು. ಹಾಗೇ ದಾಸವಾಳದ ಹೂ ದೇವಿಯ ಶೃಂಗಾರಕ್ಕೆ ಬಳಸಿದರೆ ಮನೆಯಲ್ಲಿ ಏಳಿಗೆಯಾಗುವಂತೆ ಲಕ್ಷ್ಮೀ ಅನುಗ್ರಹಿಸುತ್ತಾಳೆ. ಆದರೆ ನೀಲಿ ಬಣ‍್ಣದ ಹೂವನ್ನು ಬಳಸಬೇಡಿ. ಬಿಳಿ, ಹಳದಿ, ಕೆಂಪು ಬಣ್ಣದ ಹೂಗಳನ್ನು ಬಳಸಿ.