ಬೆಂಗಳೂರು : ಇಂದು ವರಮಹಾಲಕ್ಷ್ಮೀ ಹಬ್ಬಕ್ಕೆ ಮಹಿಳೆಯರು ಲಕ್ಷ್ಮೀಯ ವ್ರತ ಮಾಡುತ್ತಾರೆ. ಆ ವೇಳೆ ಪೂಜೆಗೆ ಲಕ್ಷ್ಮೀ ದೇವಿಗೆ ನೈವೇದ್ಯವನ್ನು ಇಡುತ್ತಾರೆ. ಆಗ ಈ 5 ನೈವೇದ್ಯಗಳಲ್ಲಿ ಯಾವುದಾದರೂ ಒಂದನ್ನು ಇಡಲೇಬೇಕು.
ಲಕ್ಷ್ಮೀಯ ನೈವೇದ್ಯಕ್ಕೆ ಮೊಸರನ್ನ ಮಾಡಿ ಇಡುತ್ತಾರೋ ಅವರ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಹಾಲು ಮತ್ತು ಅಕ್ಕಿಯಿಂದ ತಯಾರಿಸಿದ ಪಾಯಸವನ್ನು ನೈವೇದ್ಯಕ್ಕೆ ಇಡಬೇಕು. ಯಾರಿಗೆ ಪುತ್ರ ಸಂತಾನ ಬೇಕೋ ಅವರು ಪೂಳಿಯೊಗರೆವನ್ನು ಲಕ್ಷ್ಮೀಯ ನೈವೇದ್ಯಕ್ಕೆ ಇಡಬೇಕು. ಖಾರ ಪೊಂಗಲ್ ಇಟ್ಟರೆ ವಂಶಕ್ಕೆ ಏಳಿಗೆ ಆಗುತ್ತದೆ. ಬೆಲ್ಲದಿಂದ ತಯಾರಿಸಿದ ಪೊಂಗಲ್ ಇಟ್ಟರೆ ಅಷ್ಟ ಲಕ್ಷ್ಮೀಯ ಅನುಗ್ರಹ ದೊರೆತು ಆರೋಗ್ಯ ದೊರೆಯುತ್ತದೆ.