ಬೆಂಗಳೂರು : ನವಿಲುಗರಿಯನ್ನು ಕೃಷ್ಣ ತನ್ನ ತಲೆಯ ಮೇಲೆ ಹಾಗೂ ಇಂದ್ರ ತನ್ನ ಸಿಂಹಾಸನದ ಮೇಲೆ ಇಡುತ್ತಾರೆ. ಹಾಗಾಗಿ ಹಿಂದೂ ಧರ್ಮದಲ್ಲಿ ಪವಿತ್ರವಾದ ಸ್ಥಾನವಿದೆ. ಹಾಗಾಗಿ ನವಿಲುಗರಿಯನ್ನು ಬಳಸುವುದರಿಂದ ಹಲವು ಲಾಭಗಳನ್ನು ಪಡೆಯಬಹುದು.
ಮಕ್ಕಳ ಸ್ಕೂಲ್ ಬ್ಯಾಗ್ ನಲ್ಲಿ ನವಿಲುಗರಿಯನ್ನು ಇಡುವುದರಿಂದ ಅವರಿಗೆ ವಿದ್ಯೆ ಚೆನ್ನಾಗಿ ತಲೆಗೆ ಹೋಗುತ್ತದೆ. ಜೇಬಿನಲ್ಲಿ ನವಿಲುಗರಿ ಇಟ್ಟರೆ ರಾಹು ದೆಸೆ ನಿಮ್ಮ ಮೇಲೆ ಬೀಳುವುದಿಲ್ಲ. ಮನೆಯ ಮುಖ್ಯ ದ್ವಾರ ವಾಸ್ತುವಿಗೆ ವಿರುದ್ಧವಾಗಿದ್ದರೆ ದ್ವಾರದ ಮೇಲೆ ಮೂರು ನವಿಲುಗರಿಯನ್ನು ಇಡಿ. ಗಂಡ ಹೆಂಡತಿಯ ನಡುವೆ ಜಗಳವಾಗುತ್ತಿದ್ದರೆ ನವಿಲುಗರಿಯನ್ನು ಅವರ ಮದುವೆ ಫೋಟೊದ ಜೊತೆ ಇಡಬೇಕು.