Publish Date: Tue, 09 Mar 2021 (11:16 IST)
Updated Date: Tue, 09 Mar 2021 (11:18 IST)
ಬೆಂಗಳೂರು : ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮೇಲೆ ಒಬ್ಬ ಮಹಾನಾಯಕ ಷಡ್ಯಂತ್ರ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್ ಜಾರಕಿಹೊಳಿ ಅವರ ಬಳಿ ಇದರ ಹಿಂದೆ ಜೆಡಿಎಸ್ ಕೈವಾಡವಿದೆಯೇ ಎಂದು ಮಾಧ್ಯಮದವರು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ನನ್ನ ಜೊತೆ ಮೊದಲು ಮಾತನಾಡಿದ್ದು ಹೆಚ್.ಡಿ.ಕುಮಾರಸ್ವಾಮಿ, ರೇವಣ‍್ಣ. ದೇವೇಗೌಡರ ಇಡೀ ಕುಟುಂಬವೇ ನನ್ನ ಜತೆ ಮಾತಾಡಿದೆ. ಸರ್ಕಾರ ಬೀಳಿಸಿದ ಸಿಟ್ಟಿದ್ದರೆ ನನ್ನ ಜೊತೆ ಏಕೆ ಮಾತಾಡ್ತಿದ್ರು ಎಂದು ಜೆಡಿಎಸ್ ನಾಯಕರ ಪರವಾಗಿ ಮಾತನಾಡಿದ್ದಾರೆ.