Publish Date: Wed, 13 May 2020 (08:22 IST)
Updated Date: Wed, 13 May 2020 (08:25 IST)
ಬೆಂಗಳೂರು : ವಾಸ್ತು ಶಾಸ್ತ್ರವು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸುಖ, ಸಮೃದ್ಧಿ, ದೃಷ್ಟಿದೋಷ ನಿವಾರಣೆಗೆ ವಾಸ್ತು ಅತ್ಯವಶ್ಯಕ. ನಮ್ಮ ಸುತ್ತಮುತ್ತಲಿನ ಕೆಲವು ಗಿಡಗಳು ವಾಸ್ತು ದೋಷವನ್ನು ನಿವಾರಣೆ ಮಾಡುತ್ತವೆ.
ಮದುವೆ ವಿಳಂಬವಾಗುತ್ತಿದ್ದರೆ ಮನೆಯ ಹಿಂಬದಿಯಲ್ಲಿ ಬಾಳೆಗಿಡವನ್ನು ಬೆಳೆಸಿ. ಹಾಗೇ ಮನೆಯ ಮುಂದೆ ತುಳಸಿ ಗಿಡ ನೆಡುವುದರಿಂದ ನಕರಾತ್ಮಕ ಶಕ್ತಿ ನಾಶವಾಗುತ್ತದೆ.
ಅಲ್ಲದೇ ಮನೆಯಲ್ಲಿ ದಾಳಿಂಬೆ ಗಿಡ ಬೆಳೆಸಿದರೆ ರಾಹು, ಕೇತು, ತಂತ್ರಮಂತ್ರದ ಸಮಸ್ಯೆ ಕಡಿಮೆಯಾಗುತ್ತದೆ. ಮನೆಯ ಬಳಿ ಶಮಿ ಗಿಡ ಬೆಳೆಸಿದರೆ ಶನಿ ಪ್ರಭಾವದಿಂದ ದೂರವಿರಬಹುದು.