ಬೆಂಗಳೂರು : ಮನೆಯನ್ನು ಒಳಗಡೆ ಮಾತ್ರ ಶುಚಿಯಾಗಿಟ್ಟುಕೊಂಡರೆ ಸಾಲದು. ಮನೆಯ ಸುತ್ತಮುತ್ತ ಏನಾಗಿದೆ ಎಂದು ಗಮನಿಸುತ್ತ ಇರಬೇಕು. ಇಲ್ಲವಾದರೆ ಮನೆಯ ಆಸುಪಾಸು ಈ ವಸ್ತುಗಳಿದ್ದರೆ ಆ ಮನೆಗೆ ದರಿದ್ರ ಆವರಿಸುವುದು ಖಂಡಿತ.
* ನಿಮ್ಮ ಮನೆಯ ಅಂಗಡಿ ಅಥವಾ ಆಸು ಪಾಸಿನಲ್ಲಿ ಪಾರಿವಾಳದ ಗೂಡುಗಳಿದ್ದರೆ ಅದನ್ನು ತೆಗೆದು ಹಾಕಿ. ಯಾಕೆಂದರೆ ಇದು ಬಡತನಕ್ಕೆ ಕಾರಣವಾಗುತ್ತದೆ.
* ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದರೆ ತಕ್ಷಣ ಅದನ್ನು ಸರಿಪಡಿಸಿ. ಇಲ್ಲವಾದರೆ ಅಂತಹ ಮನೆಯಲ್ಲಿ ವಾಸಿಸುವ ಮನಸ್ಸುಗಳಲ್ಲಿ ಸಹ ಬಿರುಕನ್ನು ಮೂಡಿಸುತ್ತದೆ. ಮನೆಯಲ್ಲಿ ನೆಮ್ಮದಿ ಹಾಳಾಗುತ್ತದೆ.
* ಮನೆಯಲ್ಲಿ ಜೇಡರ ಬಲೆ ಕಟ್ಟಿದ್ದರೆ ಅದನ್ನು ಕಂಡ ತಕ್ಷಣ ತೆಗೆದು ಹಾಕಿ.ಇಲ್ಲವಾದರೆ ಹಣಕಾಸಿನ ಸಮಸ್ಯೆ ನಿಮಗೆ ಎದುರಾಗುತ್ತದೆ.
* ಮನೆಯ ಮುಂದಿರುವ ಗಿಡ ಮತ್ತು ಮರಗಳಿಂದ ಒಣಗಿದ ಎಲೆಗಳು ಸಾಮಾನ್ಯವಾಗಿ ಬೀಳುತ್ತಿರುತ್ತವೆ. ತಕ್ಷಣ ಅವುಗಳನ್ನು ಸ್ವಚ್ಛಗೊಳಿಸಿ. ಇದು ಕೂಡ ಆರ್ಥಿಕವಾಗಿ ನಷ್ಟಕ್ಕೆ ಕಾರಣವಾಗಬಹುದು.
ಮನೆ ಅಥವಾ ಅಂಗಡಿ ಬಳಿ ಜೇನು ಗೂಡು ಕಟ್ಟಿದರೆ ಅದು ಅಶುಭ ಎಂದು ಪರಿಗಣಿಸಲಾಗಿದೆ . ಹಣ ವಿಪರೀತವಾಗಿ ಖರ್ಚಾಗುವ ಲಕ್ಷಣವನ್ನು ಇದು ಸೂಚಿಸುತ್ತದೆ .