ಬೆಂಗಳೂರು: ಸೋಮವಾರ ಎಂದರೆ ವಾರದ ಆರಂಭದ ದಿನ. ಹೊಸದೊಂದು ವಾರ ಆರಂಭವಾಗುವಾಗ ಈ ವಾರವಿಡೀ ಶುಭವಾಗಿಯೇ ಇರಲಿ ಎಂದು ಅಂದುಕೊಂಡೇ ದಿನ ಶುರು ಮಾಡುತ್ತೇವೆ. ಸೋಮವಾರದಂದು ಯಾವ ಬಣ್ಣದ ಬಟ್ಟೆ ಧರಿಸಿದರೆ ಶುಭ ಎಂದು ನೋಡೋಣ.
ಸೋಮವಾರವೆಂದರೆ ಶಿವನನ್ನು ಆರಾಧಿಸುವ ದಿನ. ಇಂದು ಯಾವುದೇ ಕೆಲಸಕ್ಕೆ ಮುನ್ನ ಶಿವನನ್ನು ಪೂಜೆ ಮಾಡಿ ಮುಂದುವರಿದರೆ ಎಲ್ಲವೂ ಶುಭವಾಗುತ್ತದೆ. ಕೆಲವರು ಈ ದಿನ ಉಪವಾಸವಿದ್ದು ಶಿವನನ್ನು ಆರಾಧಿಸುತ್ತಾರೆ. ಈ ದಿನ ಶಿವನಿಗೆ ಹಾಲಿನ ಅಭಿಷೇಕ ಮಾಡಿದರೆ ಅಂದುಕೊಂಡ ಕೆಲಸಗಳು ನೆರವೇರುತ್ತದೆ.
ಶಿವನಿಗೆ ಪ್ರಿಯವಾದ ಬಣ್ಣವೆಂದರೆ ಬಿಳಿ ಬಣ್ಣ. ಸೋಮವಾರ ಶಿವನಿಗೆಂದೇ ಮೀಸಲಾದ ದಿನ. ಹೀಗಾಗಿ ಭಗವಾನ್ ಶಿವನಿಗೆ ಪ್ರಿಯವಾದ ಬಿಳಿಯ ಬಣ್ಣದ ಬಟ್ಟೆ ಧರಿಸುವುದು ಇಂದಿನ ದಿನ ನಿಮಗೆ ಅದೃಷ್ಟ ತಂದುಕೊಡುತ್ತದೆ. ಬಿಳಿ ಬಣ್ಣದ ಬಟ್ಟೆ, ವಸ್ತುಗಳನ್ನೇ ಧರಿಸಿದರೆ ಅತ್ಯಂತ ಶುಭದಾಯಕವಾಗಿರುತ್ತದೆ.
ಅದರ ಜೊತೆಗೆ ಯಾರಿಗಾದರೂ ದಾನ ಮಾಡುವಾಗ ಬಿಳಿ ಬಣ್ಣದ ಹಾಲು, ಸಕ್ಕರೆ, ಅಕ್ಕಿ, ಧಾನ್ಯಗಳನ್ನು ದಾನ ಮಾಡಿದರೆ ನಿಮಗೆ ಒಳಿತಾಗುತ್ತದೆ. ಅಲ್ಲದೆ ಜಾತಕದಲ್ಲಿ ಚಂದ್ರನ ಬಲ ಹೆಚ್ಚಾಗಬೇಕೆಂದರೆ ಈ ದಿನ ಚಂದ್ರಶೇಖರ ಸ್ತೋತ್ರವನ್ನು ಪಠಣ ಮಾಡಿದರೆ ನಿಮಗೆ ಒಳಿತಾಗುತ್ತದೆ.