ಬೆಂಗಳೂರು: ವಿಧ್ಯಾಧಿಪತಿ ಗಣೇಶನನ್ನು ಪೂಜಿಸುವುದದರಿಂದ ವಿದ್ಯಾರ್ಥಿಗಳಿಗೆ ಎದುರಾಗುವ ಅಡೆತಡೆಗಳು ನಿವಾರಣೆಯಾಗಿ ಯಶಸ್ಸು ಸಿಗುತ್ತದೆ. ಬುಧವಾರ ವಿನಾಯಕನ ದಿನವಾಗಿದ್ದು, ಈ ದಿನ ವಿದ್ಯಾರ್ಥಿಗಳು ಗಣೇಶನನ್ನು ವಿಶೇಷವಾಗಿ ಪೂಜಿಸಬೇಕು.
ಕೆಲವರಿಗೆ ವಿದ್ಯೆ ಎಷ್ಟು ಓದಿದರೂ ತಲೆಗೆ ಹತ್ತುವುದಿಲ್ಲ. ಇನ್ನು ಕೆಲವರಿಗೆ ಪರೀಕ್ಷೆ ಭಯವಿರುತ್ತದೆ. ಎಷ್ಟೇ ಓದಿದರೂ ಪರೀಕ್ಷೆ ಹಾಲ್ ನಲ್ಲಿ ಎಲ್ಲವೂ ಮರೆತುಬಿಡುತ್ತಾರೆ. ಮತ್ತೆ ಕೆಲವರಿಗೆ ಶಾಲೆ ಅಥವಾ ಕಾಲೇಜಿಗೆ ಹೋಗಲು ಒಂದು ರೀತಿಯ ಆಲಸಿ ಮನೋಭಾವವಿರುತ್ತದೆ.
ಇಂತಹವರು ಖಾಡಖಂಡಿತವಾಗಿ ಗಣೇಶ ದೇವರ ಪೂಜೆ ಮಾಡಿದರೆ ಅಂದುಕೊಂಡಿದ್ದು ನೆರವೇರುತ್ತದೆ. ನಮ್ಮ ಹಿಂದೂ ಧರ್ಮದಲ್ಲಿ ಎಲ್ಲಾ ದೇವರಿಗೆ ಒಂದೊಂದು ದಿನ ಮೀಸಲಾಗಿದೆ. ಅದೇ ರೀತಿ ವಿದ್ಯಾಧಿಪತಿ ವಿನಾಯಕನಿಗೆ ಬುಧವಾರದಂದು ವಿಶೇಷ ದಿನ. ಈ ದಿನ ಕೆಲವೊಂದು ಶ್ಲೋಕಗಳನ್ನು ಹೇಳಿ ಗಣೇಶನ ಪೂಜೆ ಮಾಡಿದರೆ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವುದು.
ವಕ್ರ ತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ
ಗಜಾನನಂ ಭೂತ ಗಣಾಧಿ ಸೇವಿತಂ ಕಪಿತ್ಥ ಜಂಬೂ
ಫಲಸಾರ ಭಕ್ಷಿತಂ ಉಮಾ ಸುತಂ ಶೋಕ ವಿನಾಶ ಕಾರಕಂ
ನಮಾಮಿ ವಿಘ್ನೇಶ್ವರ ಪಾದ ಪಂಕಜಂ
ಓಂ ಏಕದಂತಾಯ ವಿಘ್ನಹೇ , ವಕ್ರ ತುಂಡಾಯ ಧೀಮಹೀ
ತನ್ನೋ ದಂತಿ ಪ್ರಚೋದಯಾತ್
ಎಂಬ ಈ ಮೂರು ಶ್ಲೋಕಗಳನ್ನು ಬುಧವಾರದಂದು ಪಠಿಸಿ ಗಣೇಶನ ಪೂಜೆ ಮಾಡಿದರೆ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವುದು.