ಬೆಂಗಳೂರು : ತುಂಬಾ ದಪ್ಪವಾಗಿರುವವರು ತೂಕ ಇಳಿಸಿಕೊಳ್ಳಬೇಕೆಂದಿದ್ದರೆ ಸ್ಯಾಂಡಲ್ ವುಡ್ ನಟಿ ನಮಿತಾ ಅವರನ್ನು ಫಾಲೋ ಮಾಡಿ.
ಹೌದು. ಒಂದು ಕಾಲದಲ್ಲಿ ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಜನರ ಮನಗೆದ್ದ ನಟಿ ನಮಿತಾ ಒಂದೇ ಸಮನೆ ದಪ್ಪ ಆಗಿ ಹೋದರು. ಇದರಿಂದ ಅವರಿಗೆ ಸಿಗಬೇಕಿದ್ದ ಅವಕಾಶಗಳು ಕೂಡಾ ಕಡಿಮೆಯಾಗ್ತಾ ಬಂದವು. ಆದರೆ ಇದೀಗ ನಟಿ ನಮೀತಾ ಅವರನ್ನು ನೋಡಿದವರು ಶಾಕ್ ಆಗ್ತಾರೆ.
ಯಾಕೆಂದರೆ ಮದುವೆಯಾದ ನಂತರ ನಟಿ ನಮೀತಾ ತೂಕ ಇಳಿಸಿಕೊಳ್ಳುತ್ತಾ ಬಂದಿದ್ದಾರೆ. ಇದೀಗ ಅವರು ಸುಮಾರು 5 ತಿಂಗಳನಿಲ್ಲಿ 10 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು ತುಂಬಾ ಇಷ್ಟ ಪಡುವ ನಾನ್ ವೆಜ್ ಊಟ ಬಿಟ್ಟು ಬರೀ ವೆಜ್ ಊಟವನ್ನು ಅವಲಂಬಿಸಿದ್ದಾರಂತೆ. ಇದರ ಜೊತೆಗೆ ಊಟಕ್ಕೆ ತಕ್ಕಂತೆ ವ್ಯಾಯಾಮಗಳನ್ನು ಮಾಡಿಕೊಂಡು ಬರ್ತಾ ಇದ್ದಾರಂತೆ. ಹಾಗಾಗಿ ಅವರು10 ಕೆಜಿ ತೂಕ ಇಳಿಸಿದ್ದಾರಂತೆ.
ಈಗ ತೂಕ ಕಡಿಮೆಯಾದ ಫೋಟೋ ಜೊತೆಗೆ 5 ತಿಂಗಳ ಹಿಂದಿನ ಪೋಟೋ ಒಂದನ್ನು ನಮಿತ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುವುದರ ಮೂಲಕ ಸುದ್ದಿಯಾಗಿದ್ದಾರೆ. ಸದ್ಯ ತೂಕ ಕಡಿಮೆಯಾಗ್ತಾ ಇದ್ದಂತೆ ನಮಿತಾಗೆ ಆಫರ್ ಮೇಲೆ ಆಫರ್ ಗಳ ಸುರಿಮಳೆ ಬರ್ತಾ ಇವೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ