ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ ಮದುವೆಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೆ ಪ್ರಾಮುಖ್ಯತೆ ಮದುವೆಯಲ್ಲಿ ವರ ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಇದೆ. ಮುತ್ತೈದೆಯರ ಐದು ಮುತ್ತುಗಳಾದ ಕಾಲುಂಗುರ, ಕಿವಿಯೊಲೆ, ಸಿಂಧೂರ, ಮೂಗುತಿಯ ಜೊತೆಗೆ ಕರಿಮಣಿಯು ಒಂದು.
ವಿವಾಹಿತ ಹೆಂಗಸಿನ ಮೇಲೆ ಕೆಟ್ಟ ದೃಷ್ಟಿ ಬೀಳಬಾರದೆಂದು ಮಂಗಳಸೂತ್ರದಲ್ಲಿ ಕಪ್ಪು ಬಣ್ಣದ ಮಣಿಗಳಿರುವುದು ಎಂಬ ನಂಬಿಕೆ ಇದೆ. ಹಾಗೆ ಕರಿಮಣಿಗಳು ಋಣಾತ್ಮಕ ಶಕ್ತಿಯನ್ನು ಹೀರಿ ಅವಳ ಕುಟುಂಬದ ಸದಸ್ಯರನ್ನು ಕಾಪಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ರಾಶಿಯವರು ಎಷ್ಟೆಷ್ಟು ಕರಿಮಣಿಯನ್ನು ಸರದಲ್ಲಿ ಹಾಕಿಕೊಳ್ಳಬೇಕೆಂಬುದನ್ನು ತಿಳಿಸಿದೆ.