Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಮ್ಮನೆ ಬೀರುವಿನಲ್ಲಿ ಏನಿದ್ರೆ ಲಕ್ಷ್ಮೀ ದೇವಿ ಒಲಿಯುತ್ತಾಳೆ ಗೊತ್ತಾ...?

ನಿಮ್ಮನೆ ಬೀರುವಿನಲ್ಲಿ ಏನಿದ್ರೆ ಲಕ್ಷ್ಮೀ ದೇವಿ ಒಲಿಯುತ್ತಾಳೆ ಗೊತ್ತಾ...?
ಬೀರುವಿನಲ್ಲಿಯೂ ಅಡಗಿದೆ ಲಕ್ಷ್ಮೀ ಕಟಾಕ್ಷ , ಬುಧವಾರ, 20 ಡಿಸೆಂಬರ್ 2017 (06:24 IST)
ಬೆಂಗಳೂರು: ಬೀರುವಿನಲ್ಲಿ ಎಲ್ಲರು ಹಣ, ಚಿನ್ನ, ಬಟ್ಟೆ ಹೀಗೆ ಅಮೂಲ್ಯವಾದ ವಸ್ತುಗಳನ್ನು ಇಡುತ್ತಾರೆ. ಆದ್ದರಿಂದ ಬೀರು ಕೂಡ ಲಕ್ಷ್ಮೀ ನಿವಾಸವೇ ಆಗಿದೆ. ಇದನ್ನು ಸರಿಯಾದ ಸ್ಥಳದಲ್ಲಿ ಇಟ್ಟರೆ ಮಾತ್ರ ನಮಗೆ ಲಕ್ಷ್ಮೀ ಒಲಿಯುವುದು.


ಬೀರು ಯಾವಾಗಲೂ ನೈರುತ್ಯ ದಿಕ್ಕಿನಲ್ಲೆ ಇರಬೇಕು. ಅಂದರೆ ದಕ್ಷಿಣ ಹಾಗು ಪಶ್ಚಿಮದ ಮಧ್ಯಭಾಗದಲ್ಲಿ ಇರಬೇಕು. ಬೀರು ಬಾಗಿಲನ್ನು ತೆರೆದಾಗ ಅದು ಉತ್ತರ ದಿಕ್ಕನ್ನು ನೋಡುವಂತೆ ಇರಬೇಕು. ಬೀರು ಬಾಗಿಲನ್ನು ತೆರೆದಾಗ ಒಳ್ಳೆಯ ಸುವಾಸನೆ ಬರಬೇಕು. ಹಳೆಯ ಬಟ್ಟೆಯ ವಾಸನೆ, ಜಿರಳೆಯ ವಾಸನೆ ಬರಬಾರದು. ಈ ತರಹದ ಕೆಟ್ಟ ವಾಸನೆ ಬಂದರೆ ಲಕ್ಷ್ಮೀ ಮನೆಯಿಂದ ಹೊರಟುಹೋಗುತ್ತಾಳೆ ಎಂದು ಪಂಡಿತರು ಹೇಳುತ್ತಾರೆ.


ಬಿಳಿ ಹಾಳೆಯ ಮೇಲೆ ಕುಬೇರ ರಂಗೋಲಿಯನ್ನು ನೀಲಿ ಬಣ್ಣದಿಂದ ಬರೆದು ಆ ಕಾಗದದ ನಾಲ್ಕು ಮೂಲೆಗೆ ಅರಶಿನ ಕುಂಕುಮ ಹಚ್ಚಿ ಅದನ್ನು ಹಣ, ಬಂಗಾರ ಇಡುವ ಜಾಗದಲ್ಲಿ ಇಡಬೇಕು. ಇದರಿಂದ ಲಕ್ಷ್ಮೀ ಅನುಗ್ರಹ ದೊರೆಯುತ್ತದೆ. ಪೂಜೆಗೆ ಉಪಯೋಗಿಸುವ ಮರದ ಬೇರನ್ನು ಹಾಗು ಕರ್ಪೂರ, ಸುಗಂಧ ದ್ರವ್ಯಗಳನ್ನು ಒಂದು ಬೆಳ್ಳಿ ಅಥವಾ ತಾಮ್ರದ  ಬಟ್ಟಲಿನಲ್ಲಿ ಇಟ್ಟು ಬೀರುನೊಳಗೆ ಇಡಬೇಕು. ಇದರಿಂದ ಧನ ಅಭಿವೃದ್ಧಿಯಾಗುತ್ತದೆ. ಬೀರು ಬಾಗಿಲಿನ ಮೇಲೆ ಯಾವುದೇ ರೀತಿಯಾ ದೇವರ ಪೋಟೋ, ಪ್ರತಿಮೆಗಳನ್ನು ಅಂಟಿಸಬಾರದು. ಅದರ ಬದಲು ಒಂದು ಬಾಗಿಲಿನಲ್ಲಿ ಶುಭ ಲಾಭ ಹಾಗು ಇನ್ನೊಂದು ಬಾಗಿಲಿನ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಸರಿಯಾಗಿ ಬರೆಯಬೇಕು.ಹಾಗೆ ಅವುಗಳನ್ನು ಅರಶಿನ ಕುಂಕುಮದಲ್ಲೇ ಬರೆಯಬೇಕು. ಇದರಿಂದ ಅಷ್ಟ ಐಶ್ವರ್ಯಾಗಳು ದೊರಕುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೇವರ ಕೋಣೆಯಲ್ಲಿ ಈ ಆರು ಮೂರ್ತಿಗಳನ್ನು ಇಟ್ಟರೆ ಜೀವನ ನರಕವಾಗುತ್ತಂತೆ