ಬೆಂಗಳೂರು : ಹಿಂದೂ ಸಂಪ್ರದಾಯದ ಪ್ರಕಾರ ಪ್ರತಿಯೊಂದಕ್ಕೂ ಕೆಲವು ನಿಯಮಗಳು, ನಿಬಂಧನೆಗಳು ಇರುತ್ತವೆ. ಕಾಲ ಬದಲಾಗಿದೆ ಎಂದು ಕೆಲವರು ಅವುಗಳನ್ನು ಗಾಳಿಗೆ ತೂರುತ್ತಾರೆ. ಇನ್ನು ಕೆಲವರು ಅವುಗಳನ್ನು ಆಚರಿಸುತ್ತಾರೆ. ಆ ಆಚಾರಗಳಲ್ಲಿ ಪತ್ನಿ ಗರ್ಭಿಣಿ ಆದಾಗ ಪತಿ ಕೆಲವು ವಿಷಯಗಳಿಂದ ದೂರ ಇರಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅವು ಯಾವುದೆಂದು ತಿಳಿಬೇಕಾ.?
*ಪತ್ನಿ ಗರ್ಭಿಣಿಯಾಗಿದ್ದಾಗ ಮರ ಕಡಿಯುವುದು, ಸಮುದ್ರ ಸ್ನಾನ ಮಾಡುವುದು ಮಾಡಬಾರದಂತೆ.
*ಪತ್ನಿ ಗರ್ಭಧಾರಿಸಿ 6 ತಿಂಗಳ ನಂತರ ಪತಿ ಕ್ಷೌರ ಮಾಡಿಸಬಾರದಂತೆ.
*ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಶವವನ್ನು ಹೊರುವುದು ತಪ್ಪು ಎಂದು ಹೇಳಲಾಗುತ್ತದೆ.
*ಪತ್ನಿ ಗರ್ಭಧಾರಿಸಿದ ನಂತರ ವಿದೇಶಿ ಪ್ರಯಾಣ ಮಾಡುವುದು, ಪತ್ನಿಯನ್ನು ಬಿಟ್ಟು ದೂರ ಹೋಗುವುದು ಮಾಡಬಾರದು.
*ಪತ್ನಿ ಗರ್ಭಿಣಿಯಾಗಿದ ಏಳನೇ ತಿಂಗಳು ಪ್ರಾರಂಭವಾದಾಗಿನಿಂದ ತೀರ್ಥಯಾತ್ರೆ, ಸಮುದ್ರಯಾನ ಮಾಡಬಾರದಂತೆ.
* ಮನೆ ಸ್ತಂಭದ ಮುಹೂರ್ತ, ಗೃಹ ಪ್ರವೇಶ, ವಾಸ್ತುಕರ್ಮ ಮಾಡಬಾರದಂತೆ. ಈ ಕಾರ್ಯಗಳಿಂದ ದೂರ ಇರುವುದು ಒಳ್ಳೆಯದು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ