Publish Date: Fri, 06 Nov 2020 (06:07 IST)
Updated Date: Fri, 06 Nov 2020 (06:08 IST)
ಬೆಂಗಳೂರು : ಗ್ರಹಗಳು ಕೂಡ ನಮ್ಮ ಆರೋಗ್ಯವನ್ನು ನಿಯಂತ್ರಿಸುತ್ತವೆ. ಆದಕಾರಣ ನೀವು ಯಾವುದೇ ಅನಾರೋಗ್ಯಕ್ಕೆ ಒಳಗಾದರೆ ಜಾತಕ ಹಾಗೂ ಜ್ಯೋತಿಷ್ಯದ ಮೂಲಕ ದೋಷಪೂರಿತ ಗ್ರಹಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಹಾಗಾದ್ರೆ ಸೂರ್ಯ ಗ್ರಹ ದುರ್ಬಲವಾದರೆ ನಿಮಗೆ ಯಾವ ಸಮಸ್ಯೆ ಕಾಡುತ್ತದೆ. ಅದಕ್ಕೆ ಪರಿಹಾರವೇನು ಎಂಬುದನ್ನು ತಿಳಿದುಕೊಳ್ಳಿ.
ನಿಮ್ಮ ಜಾತಕದಲ್ಲಿ ಸೂರ್ಯ ಗ್ರಹ ದುರ್ಬಲವಾಗಿದ್ದರೆ ತಲೆ, ಕಣ್ಣು, ಹೃದಯ, ಮೆದುಳು, ಪಿತ್ತರಸಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಾಡುತ್ತದೆ. ಈ ಸಮಸ್ಯೆ ನಿವಾರಿಸಲು ಈ ಪರಿಹಾರವನ್ನು ಮಾಡಿ.
ಕೆಲಸಕ್ಕಾಗಿ ಮನೆಯಿಂದ ಹೊರಡುವ ಮೊದಲು ಒಂದು ಲೋಟ ಸಕ್ಕರೆ ನೀರು ಕುಡಿಯಿರಿ. ಮಾಂಸಹಾರವನ್ನು ತಪ್ಪಿಸಿ. ಕೋತಿಗಳು ಮತ್ತು ಕಪ್ಪು ಹಸುವಿಗೆ ಆಹಾರ ನೀಡಿ. ಪೋಷಕರನ್ನು ಹೊರತುಪಡಿಸಿ ಯಾರಿಂದಲೂ ಉಚಿತ ಉಡುಗೊರೆಗಳನ್ನು ಎಂದಿಗೂ ಸ್ವೀಕರಿಸಬೇಡಿ. ಗಾಢವಾದ ಅಥವಾ ಮಾಣಿಕ್ಯದ ಬಣ್ಣದ ಬಟ್ಟೆಗಳನ್ನು ದಾನ ಮಾಡಿ.