Select Your Language

Notifications

webdunia
webdunia
webdunia
webdunia

ಕಾಳ ಸರ್ಪ ದೋಷವಿದ್ದಾಗ ಹೇಗೆ ಪರಿಹಾರ ಮಾಡಬೇಕು

Naga God
ಜಾತಕದಲ್ಲಿ ಕಾಳ ಸರ್ಪ ದೋಷವಿದ್ದಾಗ ಜೀವನದಲ್ಲಿ ಏಳು-ಬೀಳುಗಳು, ಮಾನಸಿಕವಾಗಿ ನೆಮ್ಮದಿ ಕಳೆದುಕೊಳ್ಳುವ ಸಂದರ್ಭಗಳು ಇರುತ್ತವೆ. ಕಾಳ ಸರ್ಪ ದೋಷವಿದ್ದಾಗ ಅದಕ್ಕೆ ಯಾವೆಲ್ಲಾ ಪರಿಹಾರ ಮಾಡಬೇಕು ನೋಡಿ.

ಕಾಲಸರ್ಪ ದೋಷವು ಏಳು ಪ್ರಾಥಮಿಕ ಗ್ರಹಗಳು ರಾಹು (ಸರ್ಪದ ತಲೆ) ಮತ್ತು ಕೇತು (ಬಾಲ) ನಡುವೆ ಸುತ್ತುವರೆದಾಗ ಸಂಭವಿಸುತ್ತದೆ. ಕಾಳ ಸರ್ಪ ದೋಷವಿದ್ದಾಗ ರಾಹು ಬೀಜ ಮಂತ್ರ, ಕೇತು ಬೀಜ ಮಂತ್ರ, ಹನುಮಾನ್ ಚಾಲೀಸಾ ಮಂತ್ರವನ್ನು ಓದುತ್ತಿರಬೇಕು.

ಪೂಜಾ ಪರಿಹಾರಗಳು
ಮಹಾ ಮೃತ್ಯುಂಜಯ ಹೋಮ ನಡೆಸುವುದು, ಶಿವ ಪೂಜೆ, ರುದ್ರಾಭಿಷೇಕಗಳನ್ನು ಮಾಡಿಸುತ್ತಿರಬೇಕು. ಇನ್ನು, ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ಆಶ್ಲೇಷ ಪೂಜೆ ಮಾಡಿಸಿದರೆ ಉತ್ತಮ. ನಾಗರ ಪಂಚಮಿ ವ್ರತವನ್ನು ತಪ್ಪದೇ ಆಚರಿಸಬೇಕು.

ದಾನಗಳು
ಪಕ್ಷಿಗಳು, ಬೀದಿ ನಾಯಿಗಳಿಗೆ ಆಹಾರ ನೀಡುತ್ತಿರಬೇಕು. ಇದರಿಂದ ರಾಹು, ಕೇತು ಸಂತೃಪ್ತರಾಗುತ್ತಾರೆ. ಶನಿವಾರಗಳಂದು ಅಥವಾ ಅಮವಾಸ್ಯೆ ದಿನ ಕಪ್ಪು ಎಳ್ಳು ದಾನ, ಕಂಬಳಿ ದಾನ, ಕಬ್ಬಿಣದ ಪಾತ್ರೆ ಸಾಮಗ್ರಿಗಳನ್ನು ದಾನ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ದುರ್ಗಾ ದೇವಿಯ ಅನುಗ್ರಹಕ್ಕಾಗಿ ಇಂದು ಈ ಮಂತ್ರ ಪಠಿಸಿ