ಬೆಂಗಳೂರು: ಇಂದು ನವರಾತ್ರಿಯ ಆರನೇ ದಿನವಾಗಿದ್ದು ದುರ್ಗೆಯನ್ನು ಯಾವ ದೇವಿಯ ರೂಪದಲ್ಲಿ ಪೂಜೆ ಮಾಡುತ್ತೇವೆ ಮತ್ತು ಯಾವ ಮಂತ್ರ ಪಠಿಸಬೇಕು ಎಂಬ ವಿವರ ಇಲ್ಲಿದೆ ನೋಡಿ.
ಒಂಭತ್ತು ದಿನಗಳ ಪೈಕಿ ನವರಾತ್ರಿಯಲ್ಲಿ ಆರನೇ ದಿನವನ್ನು ದುರ್ಗಾ ದೇವಿಯನ್ನು ಕಾತ್ಯಾಯನಿಯ ರೂಪದಲ್ಲಿ ಪೂಜೆ ಮಾಡಲಾಗುತ್ತದೆ. ಕಾತ್ಯಾಯನಿ ದೇವಿಗೆ ಕೆಂಪು ಬಣ್ಣವೆಂದರೆ ಪ್ರಿಯ. ಹೀಗಾಗಿ ಇಂದು ಕೆಂಪು ಬಣ್ಣದ ಬಟ್ಟೆ ಧರಿಸಿ ಕೆಂಪು ಬಣ್ಣದ ಹೂಗಳಿಂದ ಅಲಂಕರಿಸಿ ದೇವಿಯ ಪೂಜೆ ಮಾಡಿದರೆ ಉತ್ತಮ.
ಕಾತ್ಯಾಯನಿ ದೇವಿಯನ್ನು ಪೂಜೆ ಮಾಡುವುದರಿಂದ ಜಾತಕದಲ್ಲಿ ವಿವಾಹ ಸಂಬಂಧೀ ದೋಷಗಳಿದ್ದರೆ ನಿವಾರಣೆಯಾಗಿ ವಿವಾಹ ಭಾಗ್ಯ ನಿಮ್ಮದಾಗುತ್ತದೆ. ಇದಲ್ಲದೆ ಮನುಷ್ಯನು ಧರ್ಮ, ಅರ್ಥ, ಕಾಮ, ಮೋಕ್ಷ ಎನ್ನುವ ಯೋಗಗಳನ್ನು ಪಡೆದುಕೊಳ್ಳುತ್ತಾನೆ. ನಮ್ಮ ಕಷ್ಟಗಳು ಪರಿಹಾರವಾಗುತ್ತದೆ.
ಬೆಳಿಗ್ಗೆ ಬೇಗ ಎದ್ದು ಮಡಿ ವಸ್ತ್ರದಲ್ಲಿ ಕಾತ್ಯಾಯನಿ ದೇವಿಗೆ ಈ ಮಂತ್ರವನ್ನು ಹೇಳಿ ಪೂಜೆ ಮಾಡುವುದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ.
ಕಾತ್ಯಾಯನಿ ಮಹಾಮಾಯೇ ಮಹಾಯೋಗೀನ್ಯಧೀಶ್ವರೀ
ನಂದಗೋಪಸುತಂ ದೇವಿಪತಿಂ ಮೇ ಕುರು ತೇ ನಮಃ