ಬೆಂಗಳೂರು: ಇಂದು ನವರಾತ್ರಿಯ ಐದನೆಯ ದಿನವಾಗಿದ್ದು, ದುರ್ಗಾ ದೇವಿಯನ್ನು ಸ್ಕಂದಮಾತಾ ರೂಪದಲ್ಲಿ ಪೂಜೆ ಮಾಡಲಾಗುತ್ತದೆ. ಸ್ಕಂದಮಾತಾ ದೇವಿಯ ಪೂಜೆಯ ವಿಶೇಷತೆ ತಿಳಿಯೋಣ.
ಸ್ಕಂದಮಾತಾ ಎಂದರೆ ಕಾರ್ತಿಕೇಯನ ತಾಯಿ. ಹೀಗಾಗಿಯೇ ಈ ರೂಪಕ್ಕೆ ಸ್ಕಂದ ಮಾತಾ ಎಂದು ಹೆಸರು ಬಂತು. ಸ್ಕಂದ ಎಂದರೆ ಕಾರ್ತಿಕೇಯ ಅಥವಾ ಸುಬ್ರಹ್ಮಣ್ಯ ಸ್ವಾಮಿಯ ಇನ್ನೊಂದು ಹೆಸರಾಗಿದೆ. ಸ್ಕಂದಮಾತಾ ದೇವಿಯನ್ನು ಪೂಜಿಸುವುದರಿಂದ ಇಷ್ಟಾರ್ಥ ಸಿದ್ಧಿಸುವುದರ ಜೊತೆಗೆ ಮೋಕ್ಷದ ಮಾರ್ಗವನ್ನು ಕಾಣಬಹುದಾಗಿದೆ.
ಸ್ಕಂದ ಮಾತಾ ದೇವಿ ತಾಯಿಯ ವಾತ್ಸಲ್ಯ ನೀಡುವಳು. ಆರಾಧಿಸುವ ಭಕ್ತರಿಗೆ ಮನಸ್ಸಿಗೆ ಶಾಂತಿ, ನೆಮ್ಮದಿ ಕರುಣಿಸುವಳು. ಆಕೆ ಸಿಂಹ ವಾಹಿನಿಯಾಗಿದ್ದರೂ ಭಕ್ತರ ಪಾಲಿಗೆ ತಾಯಿಯೇ ಆಗಿರುವಳು. ಸ್ಕಂದ ಮಾತೆಯನ್ನು ಪೂಜೆ ಮಾಡುವುದರಿಂದ ಮಕ್ಕಳಿಲ್ಲದವರು ಸಂತಾನಭಾಗ್ಯ ಪಡೆಯುತ್ತಾರೆ ಎಂಬ ನಂಬಿಕೆಯಿದೆ.
ಸಿಂಹಾಸನ ಗತ ನಿತ್ಯಂ ಪದ್ಮಾಶ್ರೀ ತಕರದ್ವಯಾ
ಶುಭದಾಸ್ತು ಸದಾ ದೇವಿ ಸ್ಕಂದ ಮಾತಾ ಯಶಸ್ವಿನಿ
ಈ ಮಂತ್ರವನ್ನು ಹೇಳುತ್ತಾ ಸ್ಕಂದಮಾತೆಯನ್ನು ಪೂಜಿಸುವುದರಿಂದ ದೇವಿಯ ಅನುಗ್ರಹಕ್ಕೆ ಪಾತ್ರರಾಗುವಿರಿ.