ಬೆಂಗಳೂರು: ಇಂದಿನಿಂದ ಒಂಭತ್ತು ದಿನಗಳ ನವರಾತ್ರಿಯ ವೈಭವ ಶುರು. ಇಂದು ನವರತ್ರಿಯ ಮೊದಲ ದಿನವಾಗಿದ್ದು ದೇವಿಯನ್ನು ಶೈಲಪುತ್ರಿಯ ರೂಪದಲ್ಲಿ ಆರಾಧಿಸುತ್ತೇವೆ. ಈ ದೇವಿಯ ವಿಶೇಷತೆಯೇನು ಹೇಗೆ ಪೂಜಿಸಬೇಕು ಇಲ್ಲಿದೆ ವಿವರ.
ದೇವಿಯ ಒಂಭತ್ತು ರೂಪಗಳಲ್ಲಿ ಮೊದಲನೆಯ ರೂಪ ಶೈಲಪುತ್ರಿ. ಶೈಲ ಪುತ್ರಿ ಎಂದರೆ ಪರ್ವತ ಪುತ್ರಿ ಎಂದರ್ಥ. ಈ ದೇವಿಯು ಚಂದ್ರನ ಅಧಿಪತಿಯಾಗಿದ್ದು, ಧೈರ್ಯ ಮತ್ತು ಬಲದ ಸಂಕೇತವಾಗಿದೆ. ಬಲಕೈಯಲ್ಲಿ ತ್ರಿಶೂಲ ಎಡಕೈಯಲ್ಲಿ ಕಮಲದ ಹೂ ಹಿಡಿದು ಬಸವನ ಮೇಲೆ ಕುಳಿತ ಭಂಗಿಯಲ್ಲಿ ಈ ದೇವಿಯನ್ನು ಕಾಣಬಹುದು.
ಶೈಲಪುತ್ರಿ ದೇವಿಯ ಪೂಜೆ ಮಂತ್ರ ಹೀಗಿದೆ: ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಂ ವೃಷಾರೂಢಾಂ ಶೂಲಧರಂ ಶೈಲಪುತ್ರೀಂ ಯಶಸ್ವಿನೀಂ
ಇಂದು ಈ ಮಂತ್ರವನ್ನು 108 ಬಾರಿ ಪಠಿಸುತ್ತಾ ದೇವಿಯ ಆರಾಧನೆ ಮಾಡುವುದರಿಂದ ನಿಮಗೆ ಒಳಿತಾಗುತ್ತದೆ. ಇಂದು ತಪ್ಪದೇ ಶೈಲಪುತ್ರಿ ದೇವಿಗೆ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚಿ ಪೂಜೆ ಮಾಡಿ. ತಾಯಿಗೆ ಹೂವಿನಿಂದ ಅರ್ಚನೆ ಮಾಡಿ ನೈವೇದ್ಯ ಮಾಡಿದರೆ ನಿಮಗೆ ಶೈಲಪುತ್ರಿ ದೇವಿಯ ಅನುಗ್ರಹ ಸಿಗುವುದು.