ಬೆಂಗಳೂರು: ನಾವು ಚಿಕ್ಕಂದಿನಿಂದಲೂ ಗೋವಿನ ಬಗ್ಗೆ ಕೇಳುತ್ತಲೆ ಬಂದಿದ್ದೆವೆ. ಗೋವನ್ನು ತಾಯಿಗೆ ಹೋಲಿಸುತ್ತಾರೆ. ಗೋವಿನಲ್ಲಿ ಅಷ್ಟಾನುದೇವತೆಗಳು ನೆಲೆಸಿರುತ್ತಾರೆ. ಒಂದು ಗೋವನ್ನು ಪೂಜಿಸಿದರೆ ಎಲ್ಲಾ ದೇವಾನುದೇವತೆಗಳು ಪೂಜಿಸಿದ ಪುಣ್ಯ ಸಿಗುತ್ತದೆ ಎಂದು ಪಂಡಿತರು ಹೇಳುತ್ತಾರೆ. ಗೋವಿನ ಹಾಲನ್ನು ಅಮೃತವೆಂದು ಸಹ ಹೇಳುತ್ತಾರೆ.
ಗೋವಿಗೆ ಕಡಲೆ, ಬೆಲ್ಲ, ಹುಲ್ಲು,ರೊಟ್ಟಿಯನ್ನು ತಿನ್ನಿಸುತ್ತಾರೆ. ಆದರೆ ಈ ಒಂದನ್ನು ತಿನ್ನಿಸಿದರೆ ಅದೃಷ್ಟ ಹುಡುಕಿಕೊಂಡು ಬರುತ್ತದೆಯಂತೆ. ಅದೇನೆಂದರೆ ಗೋವಿಗೆ ಉಪ್ಪನ್ನು ತಿನ್ನಿಸಬೇಕಂತೆ. ಇದರಿಂದ ಉಪ್ಪು ತಿನ್ನಿಸಿದವರು ವಿಶ್ವಾಸ ತೋರಿಸಲಿ ಅಥವಾ ತೋರಿಸದಿರಲಿ ಗೋವು ಮಾತ್ರ ಉಪ್ಪಿನ ಋಣ ತೀರಿಸುತ್ತದೆ ಎಂದು ಪುರಾಣಗಳು ಹೇಳುತ್ತದೆ.
ಗೋವಿಗೆ ಉಪ್ಪನ್ನು ಮಿತವಾಗಿ ತಿನ್ನಿಸಬೇಕು. ಗೋಶಾಲೆಯಲ್ಲಾಗಲಿ, ದೇವಾಲಯದ ಮುಂದಾಗಲಿ ಗೋವು ಕಾಣಿಸಿದರೆ ರೊಟ್ಟಿಯಲ್ಲಿ ಸ್ವಲ್ಪ ಉಪ್ಪನ್ನಿಟ್ಟು ತಿನ್ನಿಸಿದರೆ ಅದು ಕಾಮಧೇನು ರೂಪದಲ್ಲಿ ಅವರಿಗೆ ಒಳ್ಳೆದಾಗುವಂತೆ ಮಾಡುತ್ತದೆ. ಹಾಗೆ ಉಪ್ಪು ಗೋವಿನ ದೇಹಕ್ಕೂ ಕೂಡ ಬಹಳಷ್ಟು ಉಪಯೋಗಕರ. ಉಪ್ಪನ್ನು ತಿನ್ನಿಸುವುದರಿಂದ ಗೋವಿಗೆ ಯಾವುದೆ ಸಮಸ್ಯೆಯಾಗುವುದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ