ಬೆಂಗಳೂರು: ನಾವಿರುವ ಜಾಗ ಸ್ವಚ್ಛವಾಗಿದ್ದರೆ ನಮ್ಮ ಮನಸ್ಸು ಕೂಡ ಶಾಂತವಾಗಿರುತ್ತದೆ. ಆದ್ದರಿಂದ ನಮ್ಮ ಸುತ್ತ ಮುತ್ತ ಯಾವಾಗಲೂ ಶುಚಿಯಾಗಿಟ್ಟುಕೊಂಡಿರಬೇಕು. ಹಾಗಿದ್ದರೆ ಮಾತ್ರ ಲಕ್ಷ್ಮಿದೇವಿ ಮನೆಯಲ್ಲಿ ಯಾವಾಗಲೂ ನೆಲೆಸಿರುತ್ತಾಳೆ.
ಮನೆಯನ್ನು ಸ್ವಚ್ಛಗೊಳಿಸಲು ನಾವು ಪೊರಕೆಯನ್ನು ಬಳಸುತ್ತೇವೆ. ಸ್ವಚ್ಛತೆ ಎಲ್ಲಾ ಮುಗಿದ ಮೇಲೆ ಪೊರಕೆಯನ್ನು ಸರಿಯಾದ ಸರಿಯಾದ ಸ್ಥಳದಲ್ಲಿಡಬೇಕು. ಇಲ್ಲದಿದ್ದರೆ ನಮಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಪೊರಕೆಯನ್ನು ಮನೆಯ ಮುಖ್ಯದ್ವಾರದ ಹತ್ತಿರ ಅಥವಾ ಮುಂದೆ ಇಟ್ಟರೆ ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ತಾಂಡವಾಡುತ್ತವೆಯಂತೆ. ಪೊರಕೆಯನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬಾರದು. ಅದನ್ನು ನೈರುತ್ಯ ದಿಕ್ಕಿನಲ್ಲಿ ಯಾರು ನೋಡದ ಸ್ಥಳದಲ್ಲಿ ಇಟ್ಟರೆ ತುಂಬ ಒಳ್ಳೆಯದು.
ಇನ್ನು ಪೊರಕೆಯನ್ನು ಮಲಗುವ ಕೋಣೆಯಲ್ಲಿಟ್ಟರೆ ಗಂಡ-ಹೆಂಡತಿ ನಡುವೆ ಜಗಳ, ವೈಮನಸ್ಸು ಮೂಡುತ್ತದೆ. ಹಾಗೇ ಪೊರಕೆಯನ್ನು ನಿಲ್ಲಿಸಿ ಇಡಬಾರದು ಹಾಗೆ ಇಟ್ಟರೆ ಅದು ಅಪಶಕುನಕ್ಕೆ ದಾರಿ ಮಾಡಿಕೊಡುತ್ತದೆಯಂತೆ. ಪೊರಕೆಯನ್ನು ಕೃಷ್ಣಪಕ್ಷದಲ್ಲಿ ಮಾತ್ರ ಖರೀದಿಸಬೇಕಂತೆ, ಶುಕ್ಲಪಕ್ಷದಲ್ಲಿ ಖರೀದಿಸಬಾರದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.