ಬೆಂಗಳೂರು : ವರಮಹಾಲಕ್ಷ್ಮೀ ವ್ರತದ ದಿನ ಕಳಸವನ್ನು ಇಡುತ್ತಾರೆ. ಈ ಕಳಸದ ಒಳಗೆ ಈ ವಸ್ತುವನ್ನು ಹಾಕಿದರೆ ಲಕ್ಷ್ಮೀ ಒಲಿದು ಬರುತ್ತಾಳಂತೆ.
ವರಮಹಾಲಕ್ಷ್ಮೀ ವ್ರತ ಮಾಡುವಾಗ ಮನೆಯನ್ನು ಗಂಜಲದಿಂದ ಸಾರಿಸಿ ಬಳಿಕ ಮಡಿಯುಟ್ಟು ಲಕ್ಷ್ಮೀ ಯನ್ನು ಪ್ರತಿಷ್ಠಾಪಿಸಬೇಕು. ಬಳಿಕ ಕಳಸವನ್ನು ಇಟ್ಟು ಅದರೊಳಗೆ 6 ಬಾದಾಮಿ, 6 ಗೋಡಂಬಿ, 1 ಅಡಿಕೆ, 1 ಬೆಳ್ಳಿ ನಾಣ್ಯ, 6 ಕವಡೆಗಳು , ಚಿನ್ನದ ಒಡವೆ, 6 ಗೋಮತಿಚಕ್ರ, 6 ಲವಂಗ ಇವಿಷ್ಟನ್ನು ಹಾಕಿ ಮಾವಿನ ಎಲೆ ಹಾಕಿ ತೆಂಗಿನಕಾಯಿ ಇಟ್ಟು ಪ್ರತಿಷ್ಠಾಪನೆ ಮಾಡಬೇಕು.