Publish Date: Wed, 04 Dec 2019 (06:04 IST)
Updated Date: Wed, 04 Dec 2019 (06:06 IST)
ಬೆಂಗಳೂರು : ಶುಕ್ರ ದೇವ ಸುಖ ಸಂಪತ್ತಿನ ಸಂಕೇತ. ಯಾರ ಜಾತಕದಲ್ಲಿ ಶುಕ್ರದೆಸೆ ಇರುತ್ತದೆಯೋ ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಹೋದಕಡೆಯಲೆಲ್ಲಾ ಯಶಸ್ಸು ಸಿಗುತ್ತದೆ. ಆದ್ದರಿಂದ ಶುಕ್ರನ ಅನುಗ್ರಹ ನಿಮ್ಮ ಮೇಲಾಗಬೇಕೆಂದರೆ ಹೀಗೆ ಮಾಡಿ.
ಬೆರಳುಗಳಿಗೆ ಬೆಳ್ಳಿಯ ಉಂಗರ ಧರಿಸಿ. ಪ್ರತಿ ಶುಕ್ರವಾರ ಉಪ್ಪನ್ನು ಸೇವಿಸಬೇಡಿ. ಹಾಗೇ ಪತಿ ಪತ್ನಿ ಪರಸ್ಪರ ಗೌರವಿಸಿ ಆಧರಿಸಿ. ಸಂಗಾತಿಯ ಜೊತೆಗೆ ಸಮಯ ಕಳೆಯಿರಿ. ಇದರಿಂದ ಶುಕ್ರನು ಪ್ರಸನ್ನನಾಗಿ ನಿಮಗೆ ಒಲಿಯುತ್ತಾನೆ.
ಹಾಗೇ ಬಟ್ಟೆ ಹಾಗೂ ಮೊಸರು ಶುಕ್ರಗ್ರಹವನ್ನು ಪ್ರತಿನಿಧಿಸುತ್ತದೆ. ಇವೆರಡನ್ನು ದಾನ ಮಾಡುವುದರಿಂದ ಶುಕ್ರ ಗ್ರಹದ ನಕರಾತ್ಮಕ ಪರಿಣಾಮಗಳು ದೂರವಾಗುತ್ತದೆ. ಹಾಗೇ ಶುಕ್ರವಾರದಂದು ಉಪವಾಸ ಮಾಡುವುದರಿಂದ ಶುಕ್ರ ಗ್ರಹದ ಸಕರಾತ್ನಕ ಪರಿಣಾಮಗಳು ನಿಮ್ಮ ಮೇಲಾಗುತ್ತದೆ.