Publish Date: Tue, 03 Dec 2019 (11:42 IST)
Updated Date: Tue, 03 Dec 2019 (11:44 IST)
ಬೆಂಗಳೂರು : ಡಿಸೆಂಬರ್ 5ರಂದು 15 ಕ್ಷೇತ್ರಗಳಲ್ಲಿ ಉಪಚುನಾವಣೆಯ ಘೋಷಣೆಯಾದ ಹಿನ್ನಲೆಯಲ್ಲಿ ಇಂದು ಬಹಿರಂಗ ಪ್ರಚಾರಕ್ಕೆ ಅಂತಿಮ ತೆರೆ ಎಳೆಯಲಾಗುತ್ತಿದೆ.
ಅನರ್ಹ ಶಾಸಕರ ರಾಜೀನಾಮೆಯಿಂದ ತೆರನಾದ 15 ಕ್ಷೇತ್ರಗಳ ಉಪಚುನಾವಣೆ ಡಿಸೆಂಬರ್ 5 ರಂದು ನಡೆಯಲಿದೆ. ಈ ಹಿನ್ನಲೆಯಲ್ಲಿ ಚುನಾವಣೆಗೆ 2 ದಿನ ಬಾಕಿ ಇದ್ದು, ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಆದಕಾರಣ ಇಂದು ಪಕ್ಷದ ಪ್ರಬಾವಿ ನಾಯಕರು ತಮ್ಮ ಅಭ್ಯರ್ಥಿ ಪರ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.
ಹಾಗೇ ನಾಯಕರು ನಾಳೆ ಮನೆಮನೆಗೆ ತೆರಳಿ ತಮ್ಮ ಅಭ್ಯರ್ಥಿ ಪರ ಮತಯಾಚಿಸಬಹುದಾಗಿದೆ. ಆದರೆ 5ಕ್ಕಿಂತ ಹೆಚ್ಚಿನ ಗುಂಪು ತೆರಳಿ ಮತಯಾಚಿಸುವಂತಿಲ್ಲ ಎನ್ನಲಾಗಿದೆ.