ಬೆಂಗಳೂರು : ಗಣೇಶನನ್ನು ವಿಘ್ನ ವಿನಾಶಕನೆಂದು ಕರೆಯುತ್ತಾರೆ. ಗಣೇಶನನ್ನು ಆರಾಧನೆ ಮಾಡಿದರೆ ಎಲ್ಲಾ ಕಷ್ಟಗಳನ್ನು ನಿವಾರಿಸುತ್ತಾನೆ ಎಂದು ಹೇಳುತ್ತಾರೆ. ಅಲ್ಲದೇ ಗಣೇಶನ ಈ ರೀತಿಯಲ್ಲಿ ಪೂಜೆ ಮಾಡುವುದರಿಂದ ಎಲ್ಲ ದೇವಾನುದೇವತೆಗಳ ಕೃಪೆಗೆ ಪಾತ್ರರಾಗಬಹುದಂತೆ.
ಗಣೇಶನ ಆಕಾರ ಕಾಣುವ ಅರಿಶಿನದ ಗಡ್ಡೆಯನ್ನು ಪ್ರತಿ ದಿನ ಪೂಜೆ ಮಾಡಿದರೆ ಚಿನ್ನದ ಗಣೇಶ ಮೂರ್ತಿಗೆ ಮಾಡಿದ ಫಲ ಪ್ರಾಪ್ತಿಯಾಗುತ್ತದೆ. ದನದ ಗೊಬ್ಬರದಲ್ಲಿ ದೇವಿ ಲಕ್ಷ್ಮಿ ವಾಸವಾಗಿರುತ್ತಾಳೆ. ದನದ ಸಗಣಿಯಿಂದ ಗಣೇಶ ಮೂರ್ತಿ ಮಾಡಿ ಅದನ್ನು ಪೂಜೆ ಮಾಡುವುದರಿಂದ ಗಣೇಶನ ಜೊತೆ ತಾಯಿ ಲಕ್ಷ್ಮಿ ಕೂಡ ಪ್ರಸನ್ನಳಾಗುತ್ತಾಳಂತೆ.
ಅಶ್ವತ್ಥ ಮರ, ಮಾವಿನ ಮರ, ಬೇವಿನ ಮರದಲ್ಲಿ ದೇವಾನುದೇವತೆಗಳು ವಾಸವಾಗಿರುತ್ತಾರೆ. ಈ ಮರದಿಂದ ಮಾಡಿದ ಗಣೇಶನ ಮೂರ್ತಿಯನ್ನು ಮನೆಗೆ ತಂದು ಪೂಜೆ ಮಾಡಿದರೆ ಎಲ್ಲ ದೇವಾನುದೇವತೆಗಳ ಕೃಪೆ ದೊರೆಯುತ್ತದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.