ಬೆಂಗಳೂರು : ಮನೆ ನಿರ್ಮಾಣ ಮಾಡುವ ವೇಳೆ ವಾಸ್ತು, ಮಹತ್ವದ ಪಾತ್ರ ವಹಿಸುತ್ತದೆ. ಅದರಲ್ಲೂ ಮನೆಯ ಅಲಂಕಾರದ ವಿಷಯದಲ್ಲೂ ವಾಸ್ತು ಅನ್ವಯವಾಗುತ್ತದೆ. ಮನೆಯ ಸೌಂದರ್ಯಕ್ಕಾಗಿ ಅಲಂಕರಿಸುವಾಗ ಅನೇಕ ವಿಷಯಗಳ ಬಗ್ಗೆ ತಿಳಿದಿರುವುದು ಅತಿ ಅಗತ್ಯ. ಇದು ಮನೆಯ ವಾಸ್ತುದೋಷಕ್ಕೆ ಕಾರಣವಾಗುತ್ತದೆ.
ಮನೆಯ ಗಾರ್ಡನ್ ಸೌಂದರ್ಯವನ್ನು ಕಾರಂಜಿ ಹೆಚ್ಚಿಸುತ್ತದೆ. ಆದ್ರೆ ಈ ಕಾರಂಜಿಯಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿರುವ ಹಣದ ಜೊತೆಗೆ ಸಂತೋಷ ಕೂಡ ಮನೆಯಿಂದ ಹೊರಗೆ ಹರಿದು ಹೋಗುತ್ತದೆ. ಕಾರಂಜಿ ನೀರು ಹೇಗೆ ಹೊರಗೆ ಹರಿದು ಹೋಗುತ್ತದೆಯೋ ಅದೇ ರೀತಿ ಮನೆಯಲ್ಲಿರುವ ಹಣ ಹಾಗೂ ಗೌರವ ಹೊರಗೆ ಹೋಗುತ್ತದೆ.
ಮಹಾಭಾರತ ಯುದ್ಧದ ಬಗ್ಗೆ ಯಾರಿಗೆ ತಿಳಿದಿಲ್ಲ. ಯುದ್ಧದ ಫೋಟೋಗಳನ್ನು ಕೆಲವರ ಮನೆ ಗೋಡೆಗಳಲ್ಲಿ ಹಾಕುತ್ತಾರೆ. ಬಣ್ಣ ಬಣ್ಣಗಳಿಂದ ತುಂಬಿರುವ ಈ ಯುದ್ಧದ ಫೋಟೋ ನೋಡಲು ಸುಂದರವಾಗಿ ಕಾಣುತ್ತದೆ. ಆದ್ರೆ ವಾಸ್ತು ಪ್ರಕಾರ ಮನೆಯಲ್ಲಿ ಈ ಪೋಸ್ಟರ್ ಇರುವುದು ಶುಭವಲ್ಲ.
ತಾಜ್ ಮಹಲ್ ಪ್ರೀತಿಯ ಸಂಕೇತ. ಸೌಂದರ್ಯ ಹೆಚ್ಚಿಸಲು ಮನೆಯಲ್ಲಿ ತಾಜ್ ಮಹಲ್ ನ ಸಣ್ಣ ಪ್ರತಿಮೆಯನ್ನು ಇಟ್ಟಕೊಳ್ತಾರೆ. ತಾಜ್ ಮಹಲ್ ಬೇಗಂ ಮುಮ್ತಾಜ್ ಸಮಾಧಿ. ಸಮಾಧಿಯನ್ನು ಮನೆಯಲ್ಲಿಡುವುದು ಅಶುಭ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.