ಈ ಐದು ವಸ್ತುಗಳನ್ನು ಯಾರಿಗೂ ದಾನ ಮಾಡಬೇಡಿ

Krishnaveni K
ಶನಿವಾರ, 20 ಜುಲೈ 2024 (08:34 IST)
ಬೆಂಗಳೂರು: ದಾನ ಮಾಡುವುದು ಶ್ರೇಷ್ಠ ಕೆಲಸ. ಆದರೆ ಕೆಲವೊಂದು ವಸ್ತುಗಳನ್ನು ದಾನ
ಮಾಡದೇ ಇರುವುದೇ ನಿಮಗೆ ಶ್ರೇಯಸ್ಕರವಾಗಿದೆ. ಅಂತಹ ಐದು ವಸ್ತುಗಳು ಯಾವುವು ಎಂದು ನೋಡೋಣ.

ತಾಳಿ ಸರ, ಕಾಲುಂಗುರ: ಹೆಣ್ಣು ಮಕ್ಕಳಿಗೆ ತಮ್ಮ ಆಭರಣಗಳನ್ನು ಹಂಚಿಕೊಳ್ಳುವ ಅಭ್ಯಾಸವಿರುತ್ತದೆ. ಹಾಗಂತ ಯಾವುದೇ ಕಾರಣಕ್ಕೂ ನಿಮ್ಮ ತಾಳಿ ಸರ ಮತ್ತು ಕಾಲುಂಗುರವನ್ನು ಇನ್ನೊಬ್ಬರಿಗೆ ಹಾಕಿಕೊಳ್ಳಲು ಕೊಡಬೇಡಿ. ಇದರಿಂದ ನಿಮ್ಮ ಸೌಭಾಗ್ಯವನ್ನು ಇತರರಿಗೆ ನೀಡಿದಂತೆ.

ಚಾಕುವಿನಂತಹ ಹರಿತ ಆಯುಧಗಳು: ಚಾಕು, ಚೂರಿಯಂತಹ ಹರಿತ ಆಯುಧಗಳನ್ನು ಇತರರಿಗೆ ದಾನ ಮಾಡಿದರೆ ಅದರಿಂದ ನಿಮ್ಮ ಸಂಬಂಧ ಕಡಿದುಕೊಂಡತಾಗಬಹುದು. ಈ ವಸ್ತುಗಳು ದಾನ ಮಾಡಲು ಅಶುಭವಾಗಿದೆ. ಹೀಗಾಗಿ ಇವುಗಳನ್ನು ಎಂದಿಗೂ ದಾನ ಮಾಡಬೇಡಿ.

ಕರ್ಚೀಫ್: ನೀವು ಬಳಸುವ ಕರ್ಚೀಫ್ ಕೂಡಾ ಯಾರಿಗೂ ದಾನ ಮಾಡುವಂತಿಲ್ಲ. ಇದರಿಂದ ನಿಮ್ಮ ಮುಖ, ಹಣೆಯನ್ನು ಒರೆಸಿಕೊಳ್ಳುತ್ತಿರುತ್ತೀರಿ. ಇದನ್ನು ದಾನ ಮಾಡುವುದರಿಂದ ನಿಮ್ಮ ಹಣೆಯಲ್ಲಿರುವ ಅದೃಷ್ಟ ರೇಖೆ ಇನ್ನೊಬ್ಬರ ಪಾಲಾಗಬಹುದು.

ಬೆಂಕಿ ಕಡ್ಡಿಗಳು: ಹೆಸರೇ ಹೇಳುವಂತೆ ಇದು ಬೆಂಕಿ ಹಚ್ಚಲು ನೆರವಾಗುವ ಸಾಧನ. ಇದನ್ನು ದಾನ ಮಾಡುವುದರಿಂದ ಇಬ್ಬರ ನಡುವಿನ ಸಂಬಂಧ ಹಾಳಾಗಬಹುದು ಎಂಬುದು ನಂಬಿಕೆ.

ಅಕ್ವೇರಿಯಂ: ನಿಮ್ಮ ಪರಿಚಿತರ ಮನೆಗೆ ಹೋದಾಗ ಅಕ್ವೇರಿಯಂ ಇಷ್ಟವಾಯಿತೆಂದು ದಾನದ ರೂಪದಲ್ಲಿ ತಂದುಬಿಡಬೇಡಿ. ಅಥವಾ ನೀವು ಯಾರಿಗೂ ಕೊಡಬೇಡಿ. ಅಕ್ವೇರಿಯಂನನ್ನು ದಾನ ಮಾಡಿದರೆ ನಿಮ್ಮ ಬಳಿಯಿರುವ ಸಂಪತ್ತು ಮತ್ತು ಅದೃಷ್ಟ ಇತರರಿಗೆ ದಾನ ಮಾಡಿದಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿವಾರದಂದು ಶನಿ ದೇವಾಲಯಕ್ಕೆ ಈ ಎರಡು ಸಮಯದಲ್ಲೇ ಭೇಟಿ ನೀಡಬೇಕು

ಶುಕ್ರವಾರ ಯಾರು ಯಾವ ಸಮಯಕ್ಕೆ ಲಕ್ಷ್ಮೀ ಪೂಜೆ ಮಾಡಿದರೆ ಸೂಕ್ತ ತಿಳಿದುಕೊಳ್ಳಿ

ಶ್ರೀ ರಾಧಾ ಕೃಪಾಕಟಾಕ್ಷ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಬುಧವಾರ ಗಣೇಶ ಭುಜಂಗಂ ಸ್ತೋತ್ರವನ್ನು ಓದಿ

ಸಾಲ ಬಾಧೆಯಿಂದ ಬಳಲುತ್ತಿದ್ದರೆ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments