Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಹಾವಿಷ್ಣುವಿನ ಮೂಲ ಮಂತ್ರ ಯಾವುದು, ಈ ಸಮಸ್ಯೆ ಇರುವವರು ಇದನ್ನು ಪಠಿಸಲೇಬೇಕು

God

Krishnaveni K

ಬೆಂಗಳೂರು , ಬುಧವಾರ, 17 ಜುಲೈ 2024 (08:46 IST)
ಬೆಂಗಳೂರು: ತ್ರಿಮೂರ್ತಿ ದೇವರ ಪೈಕಿ ಮಹಾವಿಷ್ಣುವಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ಈ ಆಷಾಢ ಮಾಸದಲ್ಲಿ ವಿಷ್ಣುವಿನ ಆರಾಧನೆ ಮಾಡುವುದು ಮುಖ್ಯ. ಇಂದು ಮಹಾವಿಷ್ಣುವಿನ ಮೂಲ ಮಂತ್ರ ಮತ್ತು ಅದರ ಉಪಯೋಗಗಳ ಬಗ್ಗೆ ತಿಳಿದುಕೊಳ್ಳೋಣ.

ಸೃಷ್ಟಿಯ ಪರಿಪಾಲಕನಾದ ಮಹಾವಿಷ್ಣುವನ್ನು ಆಷಾಢ ಮಾಸದಲ್ಲಿ ಆರಾಧನೆ ಮಾಡುವುದರಿಂದ ನಮಗಿರುವ ಕಷ್ಟಗಳೆಲ್ಲಾ ಪರಿಹಾರವಾಗುತ್ತದೆ. ಜೊತೆಗೆ ಪಿತೃ ದೋಷಗಳೂ ನಿವಾರಣೆಯಾಗಿ ಮನೆಯಲ್ಲಿ ಸಮಸ್ತ ಅಭಿವೃದ್ಧಿ, ನೆಮ್ಮದಿ ಕಂಡುಕೊಳ್ಳಬಹುದು ಎಂದು ಶಾಸ್ತ್ರಗಳು ಹೇಳುತ್ತವೆ.

ಅದಕ್ಕಾಗಿ ನಾವು ಮಹಾವಿಷ್ಣುವಿನ ಈ ಮೂಲ ಮಂತ್ರವನ್ನು ಪ್ರತಿನಿತ್ಯ ಜಪಿಸಬೇಕು. ಅದು ಹೀಗಿದೆ:

ಸಹಾರ ವಕ್ಷಸ್ಥಳ ಕೌಸ್ತುಭ ಶ್ರಿಯಾಂ
ನಮಾಮಿ ವಿಷ್ಣುಂ ಶಿರಸಾ ಚುತುರ್ಭುಜಂ


ಈ ಮಂತ್ರವನ್ನು ಪ್ರತಿನಿತ್ಯ ಜಪಿಸಬೇಕು. ಇದರಿಂದ ಬುದ್ಧಿ, ಏಕಾಗ್ರತೆ ಹೆಚ್ಚುವುದು. ಅಲ್ಲದೆ ಒಬ್ಬ ವ್ಯಕ್ತಿಯು ತ್ವರಿತವಾಗಿ ಸಕಲ ರೀತಿಯಲ್ಲಿ ಏಳಿಗೆಯನ್ನು ಕಾಣುವನು. ಜೊತೆಗೆ ಜೀವನದಲ್ಲಿ ಸಂತೋಷವನ್ನು ಕಾಣುವನು. ವಿದ್ಯಾರ್ಥಿಗಳಲ್ಲಿ ಏಕಾಗ್ರೆತೆ ಜೊತೆಗೆ ವಿದ್ಯೆಯಲ್ಲಿ ಯಶಸ್ಸು ಪಡೆಯುತ್ತಾರೆ. ಹೀಗಾಗಿ ತಪ್ಪದೇ ಈ ಮಂತ್ರವನ್ನು ಜಪಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?