ಬೆಂಗಳೂರು : ನಮ್ಮ ಇಷ್ಟ ದೈವಕ್ಕೆ ಪೂಜೆ ಮಾಡಿದರೆ ಅದರಿಂದ ನಮಗೆ ಕಾರ್ಯ ಸಿದ್ಧಿಯಾಗುತ್ತದೆ. ಆದರೆ ದೇವರಿಗೆ ಇಷ್ಟವಾಗದ ಹೂವನ್ನು ಸಮರ್ಪಿಸಿದರೆ ಮಾತ್ರ ಅದರಿಂದ ಕೆಷ್ಟದಾಗುತ್ತದೆ. ಯಾವ ದೇವರಿಗೆ ಯಾವ ಹೂವನ್ನು ಸಮರ್ಪಿಸಬಾರದೆಂಬುದನ್ನು ತಿಳಿದುಕೊಳ್ಳಿ.
*ಮಹಾಗಣಪತಿಗೆ ತುಳಸಿ ದಳದಿಂದ ಪೂಜೆ ಮಾಡಬಾರದು.
*ಮಹಾ ವಿಷ್ಣುವಿಗೆ ಕಣಗಲೆ ಹೂವಿನಿಂದ ಪೂಜೆ ಮಾಡಬಾರದು.
* ಶಿವನಿಗೆ ಕೇದಿಗೆ ಹೂ ಮತ್ತು ಸುಗಂಧಯುಕ್ತವಾದ ಹೂಗಳಿಂದ ಪೂಜೆ ಮಾಡಬಾರದು.
*ಅಮ್ಮನವರಿಗೆ ಗರಿಕೆಯಿಂದ ಪೂಜೆ ಮಾಡಬಾರದು.
*ಮಹಾಲಕ್ಷ್ಮೀ ದೇವಿಗೆ ಉಮ್ಮತ್ತಿ ಹೂವಿನಿಂದ ಪೂಜೆ ಮಾಡಬಾರದು.
*ಸೂರ್ಯ ದೇವನಿಗೆ ಬಿಲ್ವಾರ್ಚನೆ ಮಾಡಬಾರದು.
*ಭೈರವನಿಗೆ ಮಲ್ಲಿಗೆ ಹೂವಿನಿಂದ ಪೂಜೆ ಮಾಡಬಾರದು.