Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಮನೆಯಲ್ಲಿ ಯಾವ ವಸ್ತುಗಳನ್ನು ಇಡುವುದಾದರೂ ವಾಸ್ತು ಪ್ರಕಾರ ಇಡಬೇಕಾಗುತ್ತದೆ. ಇಲ್ಲವಾದರೆ ಆ ಮನೆಯಲ್ಲಿ ಶಾಂತಿ ನೆಮ್ಮದಿ ಇರುವುದಿಲ್ಲ. ಆದಕಾರಣ ಗಡಿಯಾರವನ್ನು ಯಾವ ಕಾರಣಕ್ಕೂ ಈ ಮೂರು ಕಡೆ ಇಡಬೇಡಿ.
ಗಡಿಯಾರ ನಮ್ಮ ಸಮಯವನ್ನು ನಿಗದಿ ಮಾಡುತ್ತದೆ. ಆದಕಾರಣ ಗಡಿಯಾರವನ್ನು ದಕ್ಷಿಣ ದಿಕ್ಕಿಗೆ ಇಡಬಾರದು. ಇದರಿಂದ ಮನೆಗೆ ಪ್ರಗತಿಯಾಗುವುದಿಲ್ಲ. ಬಾಗಿಲಿನ ಮೇಲಗಡೆ ಗಡಿಯಾರವನ್ನು ಹಾಕಬಾರದು. ಇದರಿಂದ ನಮ್ಮ ಕೆಲಸ ಕಾರ್ಯಗಳು ಮುಗಿಯದೆ ಗಡಿಯಾರದಂತೆ ಸುತ್ತುತ್ತಾ ಇರುತ್ತದೆ. ಮಲಗುವ ಕೋಣೆಯಲ್ಲಿ ಗಡಿಯಾರ ಇಟ್ಟುಕೊಳ್ಳಬಾರದು. ಇದರಿಂದ ಗಂಡ ಹೆಂಡತಿ ನಡುವೆ ಜಗಳವಾಗುತ್ತದೆ.