ಬೆಂಗಳೂರು : ದೇವಸ್ಥಾನಕ್ಕೆ ಹೋದಾಗ ಎಲ್ಲರೂ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ. ಆದರೆ ಈ ಪ್ರದಕ್ಷಿಣೆಯನ್ನು ಯಾವ ಸಮಯದಲ್ಲಿ ಎಷ್ಟು ಬಾರಿ ಹಾಕಿದರೆ ಏನು ಫಲ ದೊರೆಯುತ್ತದೆ ಎಂಬುದನ್ನು ತಿಳಿದು ಅದರಂತೆ ಪ್ರದಕ್ಷಿಣೆ ಹಾಕಿ, ಇದರಿಂದ ನಿಮ್ಮ ಕೋರಿಕೆ ಈಡೇರುತ್ತದೆ.
ದೇವಸ್ಥಾನದಲ್ಲಿ 5 ಬಾರಿ ಪ್ರದಕ್ಷಿಣೆ ಮಾಡಿದರೆ ಜಯ ಸಿಗುತ್ತದೆ. 7 ಬಾರಿ ಪ್ರದಕ್ಷಿಣೆ ಮಾಡಿದರೆ ಶತ್ರುಗಳನ್ನು ಪರಾಜಯ ಮಾಡಬಹುದು. 9 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಸಂತಾನ ಪ್ರಾಪ್ತಿಯಾಗುತ್ತದೆ. 11 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಆಯುಷ್ಯ ವೃದ್ಧಿಯಾಗುತ್ತದೆ. 13 ಬಾರಿ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕಿದರೆ ಪ್ರಾರ್ಥನೆ ಸಿದ್ಧಿಯಾಗುತ್ತದೆ. 15 ಬಾರಿ ಪ್ರದಕ್ಷಿಣೆ ಹಾಕುವುದರಿಂದ ಧನ ಪ್ರಾಪ್ತಿಯಾಗುತ್ತದೆ. 17 ಬಾರಿ ಪ್ರದಕ್ಷಿಣೆ ಮಾಡಿದರೆ ಧನ ಮತ್ತು ಆಯುಷ್ಯ ವೃದ್ಧಿಯಾಗುತ್ತದೆ. 19 ಬಾರಿ ಪ್ರದಕ್ಷಿಣೆಯನ್ನು ಹಾಕಿದರೆ ರೋಗಗಳು ನಿವಾರಣೆಯಾಗುತ್ತವೆ.
ಹಾಗೇ ಪ್ರಾತಃ ಕಾಲದಲ್ಲಿ ಪ್ರದಕ್ಷಿಣೆಗಳನ್ನು ಹಾಕಿಕೊಂಡರೆ ರೋಗಗಳು ನಿವಾರಣೆಯಾಗುತ್ತವೆ. ಮಧ್ಯಾಹ್ನದ ವೇಳೆಯಲ್ಲಿ ಪ್ರದಕ್ಷಿಣೆಯನ್ನು ಹಾಕಿದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಸಂಜೆಯ ಸಮಯದಲ್ಲಿ ಪ್ರದಕ್ಷಿಣೆ ಮಾಡುವುದರಿಂದ ಪಾಪಗಳು ದೂರವಾಗುತ್ತವೆ. ರಾತ್ರಿಯ ಸಮಯದಲ್ಲಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಪಂಡಿತರು ಹೇಳುತ್ತಾರೆ.