Publish Date: Sat, 20 Mar 2021 (06:42 IST)
Updated Date: Sat, 20 Mar 2021 (06:44 IST)
ಬೆಂಗಳೂರು : ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗುತ್ತಾರೆ. ಹಾಗೇ ತಾವು ಕೆಲಸ ಯಶಸ್ವಿಯಾಗಬೇಕೆಂದು ಅಂದುಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ ಅವರ ಕೆಲಸ ಕೆಡುತ್ತದೆ. ಹಾಗಾಗಿ ನೀವು ಹೋಗುವ ಕೆಲಸ ಯಶಸ್ವಿಯಾಗಬೇಕೆಂದರೆ ಮನೆಯಿಂದ ಹೊರಡುವಾಗ ಈ ಕೆಲಸ ತಪ್ಪದೇ ಮಾಡಿ.
ಮನೆಯಿಂದ ಹೊರಡುವ ಮುನ್ನ ಗಣಪತಿಗೆ ಹಾಗೂ ನಿಮ್ಮ ಮನೆದೇವರಿಗೆ ಪೂಜೆ ಮಾಡಿ. ಧೂಪ ಹಚ್ಚಿ, ತುಪ್ಪದ ದೀಪ ಬೆಳಗಿಸಿ. ಅರಶಿನ , ಕುಂಕುಮ , ಅಕ್ಕಿ ಮತ್ತು ಹೂವನ್ನು ಒಂದು ತಟ್ಟೆಯಲ್ಲಿ ಅಲಂಕರಿಸಿ ದೇವರಿಗೆ ಆರತಿ ಮಾಡಿ. ನಮ್ಮ ಕೆಲಸ ಯಶಸ್ವಿಯಾಗಲೆಂದು ದೇವರ ಬಳಿ ಸಂಕಲ್ಪ ಮಾಡಿ ಮನೆಯಿಂದ ಹೊರಡಿ.
ಇದರಿಂದ ಸಕರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗಿ ನಿಮ್ಮ ಕೆಲಸಕ್ಕೆ ಎದುರಾಗುವ ವಿಘ್ನಗಳನ್ನು ದೂರಮಾಡಿ. ಕೆಲಸ ಯಶಸ್ವಿಯಾಗುವಂತೆ ಮಾಡುತ್ತದೆ. ನಿಮ್ಮ ಕೆಲಸ ಪೂರ್ಣವಾಗುತ್ತದೆ.