Publish Date: Fri, 19 Mar 2021 (12:59 IST)
Updated Date: Fri, 19 Mar 2021 (13:01 IST)
ಬೆಂಗಳೂರು : ವಿಧಾನ ಸಭೆಯಲ್ಲಿ ಇಂದು ಫಿಲ್ಟರ್ ಮರುಳು ದಂಧೆ ವಿರುದ್ಧ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿ.ಎನ್. ಬಾಲಕೃಷ್ಣ ಅವರು, ಹಾಸನ ಜಿಲ್ಲೆಯಲ್ಲಿ ಫಿಲ್ಟರ್ ಮರಳು ದಂಧೆ ನಡೆಯುತ್ತಿದೆ. ಗಣಿ ಇಲಾಖೆಯಲ್ಲಿ ಅಧಿಕಾರಿಗಳಿಲ್ಲ. ಇದಕ್ಕೆ ಕಡಿವಾಣ ಹಾಕುವವರು ಯಾರು ಎಂದು ಪ್ರಶ್ನಿಸಿದ್ದಾರೆ.
ಬಾಲಕೃಷ್ಣ ಆರೋಪಕ್ಕೆ ಧ್ವನಿಗೂಡಿಸಿದ ಶಾಸಕ ಅನ್ನದಾನಿ ಅವರು, ಬಡವರಿಗೆ ಫಿಲ್ಟರ್ ಮರಳು ಎಂದು ಗೊತ್ತಾಗುವುದಿಲ್ಲ. ಮುಂದೆ ಕಟ್ಟಡ ನೆಲಸಮ ಆದ್ರೆ ಅದಕ್ಕೆ ಯಾರು ಹೊಣೆ? ಎಂದು ಕೇಳಿದ್ದಾರೆ.