Publish Date: Mon, 07 Dec 2020 (07:40 IST)
Updated Date: Mon, 07 Dec 2020 (07:42 IST)
ಬೆಂಗಳೂರು : ಮನೆಯಲ್ಲಿ ಹಣದ ಒಳಹರಿವು ಹೆಚ್ಚಾದರೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹಾಗಾಗಿ ಮನೆಯಲ್ಲಿ ಹಣದ ಒಳಹರಿವು ಹೆಚ್ಚಾಗಲು ಈ ಪರಿಹಾರವನ್ನು ಮಾಡಿ.
ಗಾಜಿನ ಪಾತ್ರೆಯಲ್ಲಿ ಅಥವಾ ಬಟ್ಟಲಿನಲ್ಲಿ ಸ್ವಲ್ಪ ಕಲ್ಲುಪ್ಪನ್ನು ತೆಗೆದುಕೊಂಡು ಆ ಬಟ್ಟಲಿನಲ್ಲಿ ಉಪ್ಪಿನೊಂದಿಗೆ ನಾಲ್ಕೈದು ಲವಂಗವನ್ನು ಇಡಿ. ಇದನ್ನು ಮನೆಯ ಯಾವುದೇ ಮೂಲೆಯಲ್ಲಿ ಇಡಬಹುದು. ಇದರಿಂದ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ.
ಉಪ್ಪು ಹಣದ ಸಮಸ್ಯೆಗೆ ಕಾರಣವಾಗುವಂತಹ ನಕರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ. ಹಾಗೇ ಬಟ್ಟಲಿನಲ್ಲಿ ಸ್ಫಟಿಕ ಉಪ್ಪನ್ನು ತೆಗೆದುಕೊಂಡು ಸ್ನಾನಗೃಹದಲ್ಲಿ ಯಾರು ನೋಡದ ಸ್ಥಳದಲ್ಲಿ ಇರಿಸಿ. ಇದರಿಂದ ಮನೆಯಲ್ಲಿ ಹಣದ ಸಮಸ್ಯೆ ಎದುರಾಗುವುದಿಲ್ಲ ಮತ್ತು ಮನೆಯಲ್ಲಿ ಶಾಂತಿ, ಸಂತೋಷ ನೆಲೆಸಿರುತ್ತದೆ.