ಬೆಂಗಳೂರು: ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡುವುದು ಮಖ್ಯವಾಗಿದೆ. ಇದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳು ದೂರವಾಗಿ ನೆಮ್ಮದಿ ಕಾಣುತ್ತೇವೆ ಎಂಬ ನಂಬಿಕೆಯಿದೆ. ಶ್ರಾವಣ ಮಾಸದಲ್ಲಿ ಶಿವನನ್ನು ಒಲಿಸಿಕೊಳ್ಳಲು ಏನು ಮಾಡಬೇಕು ನೋಡಿ.
ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ. ಇದೇ ಕಾರಣಕ್ಕೆ ಈ ಮಾಸವನ್ನು ಪವಿತ್ರ ಮಾಸ ಎಂದು ಕರೆಯುತ್ತೇವೆ. ಶುಭ ಕಾರ್ಯಗಳನ್ನು ನಡೆಸಲು ಇದು ಪ್ರಶಸ್ತವಾದ ಮಾಸವಾಗಿದೆ. ಶ್ರಾವಣ ಮಾಸದಲ್ಲಿ ಬೆಳಿಗ್ಗೆಯೇ ಎದ್ದು ಸ್ನಾನ ಮಾಡಿ ಭಕ್ತಿಯಿಂದ ಶಿವನ ಪೂಜೆ ಮಾಡುವುದರಿಂದ ಶಿವನ ವಿಶೇಷ ಅನುಗ್ರಹಕ್ಕೆ ಪಾತ್ರರಾಗಲಿದ್ದೀರಿ.
ಪ್ರತೀ ಶ್ರಾವಣ ಸೋಮವಾರಗಳಂದು ಶಿವನಿಗೆ ದೀಪ ಬೆಳಗಿದರೆ ಹಲವು ದೋಷ ಪರಿಹಾರವಾಗಬಹುದಾಗಿದೆ. ಈ ತಿಂಗಳಲ್ಲಿ ಇತರರಿಗೆ ನಿಂದಿಸುವುದು, ಕೆಡುಕು ಮಾಡುವುದು, ತಾಮಸ ಆಹಾರ ಸೇವನೆ ಮಾಡುವುದನ್ನು ಮಾಡದೇ ದೇವರ ಆರಾಧನೆಯಲ್ಲಿ ತೊಡಗುವುದರಿಂದ ಶಿವನ ಕೃಪೆಗೆ ಪಾತ್ರರಾಗುತ್ತೀರಿ.
ಶ್ರಾವಣ ಮಾಸದಲ್ಲಿ ಬದನೆಯಂತಹ ಅಶುದ್ಧ ವರ್ಗಕ್ಕೆ ಸೇರಿದ ತರಕಾರಿಗಳನ್ನು ಬಳಸಬೇಡಿ. ಮಾಂಸಾಹಾರ ಸೇವನೆಯೂ ಮಾಡದೇ ಸಾತ್ವಿಕ ಆಹಾರದ ಮೂಲಕ ಶಿವನ ಆರಾಧನೆ ಮಾಡಿ. ಸೋಮವಾರದಂದು ಉಪವಾಸವಿದ್ದು ಶಿವನ ಆರಾಧನೆ ಮಾಡಿದರೆ ಮತ್ತಷ್ಟು ಉತ್ತಮ ಫಲಗಳನ್ನು ಕಾಣಬಹುದಾಗಿದೆ.