ಶನಿವಾರ ಈ ಕೆಲಸಗಳನ್ನು ಮಾಡಿದರೆ ಶನಿ ದೋಷ ಬರುತ್ತದೆ ಹುಷಾರು

Krishnaveni K
ಶನಿವಾರ, 28 ಸೆಪ್ಟಂಬರ್ 2024 (08:24 IST)
ಬೆಂಗಳೂರು: ಶನಿವಾರಗಳಂದು ಕೆಲವೊಂದು ಕೆಲಸ ಮಾಡುವುದರಿಂದ ನಿಮಗೆ ಶನಿ ದೋಷ ಕಾಡುತ್ತದೆ. ಶನಿಯ ಅವಕೃಪೆಗೊಳಗಾಗಬೇಕಾಗುತ್ತದೆ ಮತ್ತು ಹಲವು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ಶನಿವಾರ ಶನಿಗೆ ಸಂಬಂಧಿಸಿದ ದಿನವಾಗಿದೆ. ಈ ದಿನ ಶನಿ ದೇವನ ಪ್ರಾರ್ಥನೆ ಮಾಡುವುದು ಅಥವಾ ಆಂಜನೇಯಸ್ವಾಮಿಯ ಪ್ರಾರ್ಥನೆ ಮಾಡುವುದರಿಂದ ಶ್ರೇಯಸ್ಸಾಗುವುದು. ಆದರೆ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಬೇಡವೆಂದರೂ ಶನಿಯ ವಕ್ರದೃಷ್ಟಿ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ.
  
ಶನಿವಾರಗಳಂದು ಮನೆಗೆ ಕಬ್ಬಿಣದ ವಸ್ತುಗಳನ್ನು ತರಬಾರದು. ಇಂದು ಯಾರನ್ನೂ ನಿಂದಿಸಲು ಹೋಗಬೇಡಿ. ಹಾಗೆಯೇ ಶಾಪ ಹಾಕುವುದು ಮಾಡಬೇಡಿ. ಈ ದಿನ ವಿಶೇಷವಾಗಿ ಕಾಲುಗಳಿಗೆ ನೀರು ಹಾಕುವಾಗ ಕಡೆ ಭಾಗ ಒದ್ದೆ ಮಾಡಿಕೊಳ್ಳದೇ ಇದ್ದರೆ ಶನಿ ನಿಮ್ಮನ್ನು ಬೆಂಬಿಡದೇ ಕಾಡವನು. ಛತ್ರಿ, ಚರ್ಮದ ವಸ್ತುಗಳು, ಉದ್ದಿನಬೇಳೆಯನ್ನು ಖರೀದಿ ಮಾಡಿ ಮನೆಗೆ ತರಬೇಡಿ.
 
ಶನಿವಾರಗಳಂದು ಶನಿ ದೋಷದಿಂದ ಪರಿಹಾರ ಕಂಡುಕೊಳ್ಳಬೇಕಾದರೆ ಶನಿ ಅಥವಾ ಆಂಜನೇಯ ದೇವಸ್ಥಾನಕ್ಕೆ ಹೋಗಿ ಎಳ್ಳೆಣ್ಣೆ ದೀಪ ಹಚ್ಚಿ ಹಿಂತಿರುಗಿ ನೋಡದೇ ವಾಪಸಾಗಿ. ಅಥವಾ ಎಳ್ಳೆಣ್ಣೆ ದಾನ ಮಾಡಿದರೂ ಶನಿಯ ಕೆಟ್ಟ ಪ್ರಭಾವ ಕಡಿಮೆಯಾಗುತ್ತದೆ. ಅಲ್ಲದೆ, ಕಾಗೆಗಳಿಗೆ ಧಾನ್ಯಗಳ ಆಹಾರ ಕೊಟ್ಟರೆ ಒಳಿತಾಗುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸೋಮವಾರ ರುದ್ರಾಷ್ಟಕಂ ಮಂತ್ರವನ್ನು ತಪ್ಪದೇ ಜಪಿಸಿ

ಶಿವರಾತ್ರಿಯಂದು ರಾತ್ರಿ ವೇಳೆ ಮಾಡಲೇಬೇಕಾದ ವಿಚಾರಗಳು ಇಲ್ಲಿದೆ

ಶಿವರಾತ್ರಿ 2026 ಪೂಜೆ ಯಾವಾಗ ಮಾಡಬೇಕು, ಪ್ರಶಸ್ತ ಸಮಯದ ಮಾಹಿತಿ ಇಲ್ಲಿದೆ

ಶನಿ ದೋಷ ನಿವಾರಣೆಗೆ ಇಂದು ಆಂಜನೇಯ ಈ ಮಂತ್ರ ಓದಿ

ಇದೇ 15ರಂದು ಮಹಾಶಿವರಾತ್ರಿ, ಪೂಜಾ ಮೂಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ
Show comments