Publish Date: Wed, 12 Aug 2020 (07:19 IST)
Updated Date: Wed, 12 Aug 2020 (07:21 IST)
ಬೆಂಗಳೂರು : ಹಣಕಾಸಿನ ಸಮಸ್ಯೆ ಎದುರಾದಾಗ ಜನರು ಸಾಲಗಳನ್ನು ಮಾಡುತ್ತಾರೆ. ಆದರೆ ಈ ಸಾಲಗಳನ್ನು ತೀರಿಸಲು ಸಾಧ್ಯವಾಗದೆ ಒದ್ದಾಡುತ್ತಾರೆ. ಈ ಸಾಲಗಳು ತೀರಿ ಜೀವನದಲ್ಲಿ ನೆಮ್ಮದಿ ನೆಲೆಸಲು ಈ ರೀತಿ ದೀಪಾರಾಧನೆ ಮಾಡಿ.
ಸೋಮವಾರದಂದು ದೇವರ ಕೋಣೆಯಲ್ಲಿ ಪೂಜೆ ಮಾಡುವಾಗ ಒಂದು ಬಟ್ಟಲಿನಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ಒಡೆದ ತೆಂಗಿನಕಾಯಿಯನ್ನು ಭಾಗಗಳನ್ನು ಇಟ್ಟು ಅದಕ್ಕೆ ಅರಶಿನ ಕುಂಕುಮ, ಹೂ ಇಟ್ಟು ಕೊಬ್ಬರಿ ಎಣ್ಣೆ ಹಾಕಿ ಬತ್ತಿ ಇಟ್ಟು ದೀಪಾರಾಧನೆ ಮಾಡಬೇಕು. ಹೀಗೆ ಮಾಡಿದರೆ ಶಿವನ ಕೃಪೆಯಿಂದ ಸಾಲಗಳು ತೀರಿಹೋಗುತ್ತವೆ.
pavithra
Publish Date: Wed, 12 Aug 2020 (07:19 IST)
Updated Date: Wed, 12 Aug 2020 (07:21 IST)