Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದಾರಿದ್ರ್ಯ ಲಕ್ಷ್ಮೀ ಮನೆಯೊಳಗೆ ಪ್ರವೇಶ ಮಾಡಿದ್ದಾಳಾ? ಇಲ್ಲವೋ? ಎಂಬುದನ್ನು ಈ ಸೂಚನೆಗಳಿಂದ ತಿಳಿಯಿರಿ

ದಾರಿದ್ರ್ಯ ಲಕ್ಷ್ಮೀ ಮನೆಯೊಳಗೆ ಪ್ರವೇಶ ಮಾಡಿದ್ದಾಳಾ? ಇಲ್ಲವೋ? ಎಂಬುದನ್ನು ಈ ಸೂಚನೆಗಳಿಂದ ತಿಳಿಯಿರಿ
ಬೆಂಗಳೂರು , ಸೋಮವಾರ, 16 ಸೆಪ್ಟಂಬರ್ 2019 (08:16 IST)
ಬೆಂಗಳೂರು : ಮನೆಗೆ ಧನ ಲಕ್ಷ್ಮೀ ಪ್ರವೇಶಿಸಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಕೆಲವೊಮ್ಮೆ ಮನೆಯೊಳಗೆ ನಾವು ಮಾಡುವ ತಪ್ಪುಗಳಿಂದ ದಾರಿದ್ರ್ಯ ಲಕ್ಷ್ಮೀ ಪ್ರವೇಶಿಸುತ್ತಾಳೆ. ಇದರಿಂದ ಮನೆಯಲ್ಲಿ  ಕೆಟ್ಟದೇ ನಡೆಯುತ್ತಿರುತ್ತದೆ. ಈ ದಾರಿದ್ರ್ಯ ಲಕ್ಷ್ಮೀ ಹೇಗೆ ಪ್ರವೇಶಿಸುತ್ತಾಳೆ? ಆಕೆ ಮನೆಯೊಳಗೆ ಪ್ರವೇಶ ಮಾಡಿದ್ದಾಳಾ? ಒಂದು ವೇಳೆ ಮಾಡಿದರೆ ಅದಕ್ಕೆ ಪರಿಹಾರವೇನು? ಎಂಬ ಮಾಹಿತಿ ಇಲ್ಲಿದೆ ನೋಡಿ.




ಹೊರಗೆ ಹೋದವರು ಕಾಲು ತೊಳೆಯದೆ ಮನೆಗೆ ಒಳಗೆ ಬಂದರೆ ದರಿದ್ರ ಲಕ್ಷ್ಮೀ ಪ್ರವೇಶಿಸುತ್ತಾಳೆ. ಅದನ್ನು ತಿಳಿದುಕೊಳ್ಳುವುದು ಹೇಗೆಂದರೆ ಮನೆಯ ಹೆಣ್ಣಮಕ್ಕಳು ಸದಾ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದರೆ ಹಾಗೂ ಯಾವುದಾದರೂ ಸಣ್ಣ ವಿಚಾರಕ್ಕೂ ಕಣ್ಣೀರು ಹಾಕುತ್ತಿದ್ದರೆ, ಹೆಣ್ಣಮಕ್ಕಳು ಸೋಮಾರಿಗಳಂತೆ ಯಾವಾಗಲೂ ಮಲಗಿಕೊಂಡಿದ್ದರೆ,  ಸ್ನಾನದ ಮನೆ ಎಷ್ಟೇ ಸ್ವಚ್ಚ ಮಾಡಿದರೂ ದುರ್ಗಂಧ ಸೂಸುತ್ತಿತ್ತಿದ್ದರೆ ಆ ಮನೆಗೆ ದಾರಿದ್ರ ಲಕ್ಷ್ಮೀಯ ಪ್ರವೇಶವಾಗಿದೆ ಎಂದರ್ಥ.


ಇದಕ್ಕೆ ಪರಿಹಾರವೆನೆಂದರೆ ಮನೆ ಕ್ಲೀನ್ ಮಾಡುವಾಗ ಅರಶಿನ ಮತ್ತು ಉಪ್ಪನ್ನ ಬೆರೆಸಿ ಮನೆ ಒರೆಸಿದರೆ ದರಿದ್ರ ಲಕ್ಷ್ಮೀ ಮನೆಯಿಂದ ಹೊರ ಹೋಗುತ್ತಾಳೆ. ಹಾಗೇ ಮಂಗಳವಾರ, ಶುಕ್ರವಾರ, ಹಬ್ಬಹರಿದಿನಗಳು, ಅಮವಾಸ್ಯೆ ಹಾಗೂ ಹುಣ್ಣಿಮೆ ದಿನ ಬಿಟ್ಟು ಉಳಿದಂತಹ ದಿನಗಳಲ್ಲಿ ಮನೆಯಲ್ಲಿ ಕಟ್ಟಿದ ಜೇಡರ ಬಲೆಯನ್ನು ಸ್ವಚ್ಚಗೊಳಿಸಿ. ಹಾಗೇ ಸಂಜೆ ದೀಪ ಹಚ್ಚುವಾಗ ಸಾಂಬ್ರಾಣಿ ಹೊಗೆ ಹಾಕಿ ಅದಕ್ಕೆ ಬೇವಿನ ಒಣಗಿದ ಎಲೆ, ಒಣಕೊಬ್ಬರಿ ಪುಡಿ ಹಾಗೂ ಅರಶಿನ ಹಾಕಿ ಮೂಲೆ ಮೂಲೆಗೂ ಈ ದೂಪವನ್ನು ಹಿಡಿದರೆ ದರಿದ್ರ ಲಕ್ಷ್ಮೀ ಮನೆಯಿಂದ ಹೊರಟುಹೋಗುತ್ತಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವನ ಆರಾಧನೆಯ ಸಂಪೂರ್ಣ ಫಲ ಸಿಗಬೇಕಾದರೆ ಈ ಸ್ತೋತ್ರ ಹೇಳಬೇಕು