ಬೆಂಗಳೂರು : ಮಂಗಳೂರು ಮತ್ತು ದಾವಣಗರೆ ಮಹಾನಗರ ಪಾಲಿಕೆ ಸೇರಿದಂತೆ ಒಟ್ಟು 17 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.
ಮಂಗಳೂರು ಮಹಾನಗರಪಾಲಿಕೆಯ 60 ವಾರ್ಡ್ ದಾವಣಗೆರೆ ಮಹಾನಗರ ಪಾಲಿಕೆಯ 45 ವಾರ್ಡ್, ಹೊಸಕೋಟೆ ನಗರಸಭೆಯ 31 ವಾರ್ಡ್, ಕನಕಪುರ ನಗರಸಭೆಯ 31 ವಾರ್ಡ್, ಕೋಲಾರ ನಗರಸಭೆಯ 35 ವಾರ್ಡ್, ಮುಳಬಾಗಿಲು ನಗರಸಭೆಯ 31 ವಾರ್ಡ್, ಗೌರಿಬಿದನೂರು ನಗರಸಭೆಯ 31 ವಾರ್ಡ್, ಚಿಂತಾಮಣಿ ನಗರಸಭೆಯ 31 ವಾರ್ಡ್ ಮತ್ತು ಹುಣಸೂರು ನಗರಸಭೆಯ 31 ವಾರ್ಡ್ ಗಳಿಗೆ ಚುನಾವಣೆ ನಡೆಯಬೇಕಿದೆ.
ಅದೇ ರೀತಿ ಮಾಗಡಿ ಪುರಸಭೆಯ 23 ವಾರ್ಡ್, ಬೀರೂರು ಪುರಸಭೆಯ 23 ವಾರ್ಡ್, ಕಂಪ್ಲಿ ಪುರಸಭೆಯ 23 ವಾರ್ಡ್, ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿಯ 11 ವಾರ್ಡ್, ಕುಂದಗೋಳ ಪಟ್ಟಣ ಪಂಚಾಯಿತಿಯ 19 ವಾರ್ಡ್ ಹಾಗೂ ಕೂಡ್ಲಗಿ ಪಟ್ಟಣ ಪಂಚಾಯತಿಯ 20 ವಾರ್ಡ್ ಗಳಿಗೆ ಚುನಾವಣೆ ನಡೆಯಬೇಕಿದೆ.