ಬೆಂಗಳೂರು : ಸಾಮಾನ್ಯವಾಗಿ ಆಂಜನೇಯ ಸ್ವಾಮಿಗೆ ಸಿಂಧೂರವನ್ನು ಹಚ್ಚುತ್ತಾರೆ. ಸಿಂಧೂರವನ್ನು ಮಂಗಳ ಗ್ರಹಕ್ಕೆ ಹೋಲಿಸಲಾಗಿದೆ. ಹಾಗಾಗಿ ಇದನ್ನು ಮಂಗಳಕಾರಿ ಎನ್ನಲಾಗುತ್ತದೆ. ಈ ಸಿಂಧೂರದಿಂದಲೂ ಹಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.
ಹನುಮಂತನನ್ನು ಪ್ರಸನ್ನಗೊಳಿಸಲು ಮಂಗಳವಾರ ಸಿಂಧೂರವನ್ನು ಅರ್ಪಿಸಬೇಕು. ಸಮಸ್ಯೆ ಎದುರಾದಲ್ಲಿ ಹನುಮಂತನಿಗೆ ಮಲ್ಲಿಗೆ ಎಣ್ಣೆ ಹಾಗೂ ಸಿಂಧೂರವನ್ನು ಅರ್ಪಿಸಬೇಕು. ಬಿಳಿ ಕಾಗದದ ಮೇಲೆ ಸಿಂಧೂರದ ಸ್ವಸ್ತಿಕವನ್ನು ರಚಿಸಿ. ಇದನ್ನು ಸದಾ ನಿಮ್ಮ ಬಳಿ ಇಟ್ಟುಕೊಳ್ಳಿ. ಇದು ನೌಕರಿ ಸಮಸ್ಯೆಯನ್ನು ದೂರ ಮಾಡುತ್ತದೆ. ನಿಮ್ಮ ವಯಸ್ಸಿನಷ್ಟು ಅಶ್ವಥ ಎಲೆಯನ್ನು ತೆಗೆದುಕೊಂಡು ಅದರ ಮೇಲೆ ರಾಮನ ಹೆಸರನ್ನು ಸಿಂಧೂರದಲ್ಲಿ ಬರೆದು ಹನುಮಂತನ ದೇವಸ್ಥಾನಕ್ಕೆ ಅರ್ಪಿಸಿ.
ಪುರುಷರು ಹನುಮಂತನಿಗೆ ಸಿಂಧೂರವನ್ನು ಹಚ್ಚಬಹುದು. ಲೇಪನ ಕೂಡ ಮಾಡಬಹುದು. ಆದರೆ ಮಹಿಳೆಯರು ಸಿಂಧೂರವನ್ನು ಹನುಮಂತನಿಗೆ ಹಚ್ಚಬಾರದು. ಯಾವುದಾದರೂ ಒಂದು ಶುಭ ಮಂಗಳವಾರ ಹನುಮಂತನ ಚರಣಕ್ಕೆ ಸಿಂಧೂರವನ್ನು ಹಚ್ಚಿ. ಇದರಿಂದ ಯಾವುದೇ ಸಮಸ್ಯೆ ಎದುರಾದರೂ ಅದು ದೂರವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.