Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೀಲುನೋವು ಸಮಸ್ಯೆಗೆ ಉತ್ತಮ ಮನೆಮದ್ದು ಈ ಹೂವು

ಕೀಲುನೋವು ಸಮಸ್ಯೆಗೆ ಉತ್ತಮ ಮನೆಮದ್ದು ಈ ಹೂವು
ಬೆಂಗಳೂರು , ಮಂಗಳವಾರ, 14 ಮೇ 2019 (07:32 IST)
ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಹೆಚ್ಚಿನವರು ಕೀಲುನೋವು ಸಮಸ್ಯೆಯಿಂದ ಬಳಲುತ್ತಾರೆ. ಇದಕ್ಕೆ ಎಷ್ಟೇ ವೈದ್ಯರನ್ನು ಭೇಟಿ ಮಾಡಿ ಔಷಧಿಗಳನ್ನು ಸೇವಿಸಿದರೂ ಪರಿಹಾರವಾಗಿಲ್ಲ ಎನ್ನುವವರು ಒಮ್ಮೆ ಈ ಹೂವನ್ನು ಮನೆಮದ್ದಾಗಿ ಬಳಸಿ.




ಪಾರಿಜಾತ ಹೂ ಮನೆಯ ಸಕರಾತ್ಮಕ ಶಕ್ತಿಯನ್ನು ವೃದ್ಧಿಸುವುದು ಮಾತ್ರವಲ್ಲ ಕೀಲು ನೋವಿಗೆ ಒಂದು ಒಳ್ಳೆಯ ಮನೆಮದ್ದು. ಈ ಹೂವು ಬಹಳ ಸುಗಂಧಭರಿತವಾಗಿದ್ದು, ಇದು ರಾತ್ರಿ ಹೊತ್ತಿನಲ್ಲಿ ಹೆಚ್ಚಾಗಿ ಅರಳುತ್ತದೆ. ಇದು ದೇವರಿಗೆ ಬಹಳ ಪ್ರಿಯವಾದ ಹೂವು.


ಇದರ ಎಲೆಗಳನ್ನು ಹಾಗೂ ಹೂವಗಳನ್ನು ತೆಗೆದುಕೊಂಡು ನುಣ್ಣಗೆ ಫೇಸ್ಟ್ ಮಾಡಿಕೊಳ್ಳಬೇಕು, ಅದನ್ನು ಒಂದು ಗ್ಲಾಸ್ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು, ಆ ನೀರು ಅರ್ಧ ಆಗುವವರೆಗೂ ಕಷಾಯದಂತೆ ಮಾಡಿಕೊಳ್ಳಬೇಕು, ಆ ಕಷಾಯವನ್ನು ರಾತ್ರಿಯೆಲ್ಲ ಹಾಗೆಯೇ ಇಟ್ಟು ಬೆಳಿಗ್ಗೆ ತಣ್ಣಗೆ ಇರುವಾಗಲೇ ಕುಡಿಯಬೇಕು. ಇದನ್ನು ಪ್ರತಿದಿನ ತೆಗೆದುಕೊಂಡರೆ ಕೇವಲ 30 ರಿಂದ 40 ದಿನಗಳಲ್ಲೇ ಕೀಲು ನೋವು ವಾಸಿಯಾಗುತ್ತದೆ, ಅಲ್ಲದೇ ಮೂಳೆಗಳಲ್ಲಿ ಸವೆದುಹೋಗಿರುವ ಕಾರ್ಟಿಲೆಜ್ ಎಂಬ ಅಂಶ ಮತ್ತೆ ಉತ್ಪತ್ತಿಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಅತಿ ಹೆಚ್ಚು ಬಾರಿ ಸ್ನಾನ ಮಾಡಿದರೆ ಆರೋಗ್ಯ ಹಾಳಾಗುತ್ತದೆಯಂತೆ. ಇದಕ್ಕೆ ಕಾರಣ ಇಲ್ಲಿದೆ ನೋಡಿ