ನವದೆಹಲಿ: ದೇಶದಲ್ಲಿ ಸೂರ್ಯಗ್ರಹಣವು ಗುರುವಾರದಂದು ಬೆಳಗ್ಗೆ ಎಂಟು ಗಂಟೆಗೆ ಪ್ರಾರಂಭವಾಗಿ ಪೂರ್ಣ ಸೂರ್ಯಗ್ರಹಣ ಬೆಳಗ್ಗೆ 9.06 ಕ್ಕೆ ಅಂತ್ಯಗೊಳ್ಳಲಿದೆ. ಭಾಗಶಃ ಸೂರ್ಯಗ್ರಹಣ ಮಧ್ಯಾಹ್ನ 12.29 ಕ್ಕೆ ಮುಕ್ತಾಯವಾಗಲಿದ್ದರೆ, ಪೂರ್ಣ ಸೂರ್ಯಗ್ರಹಣ ಮಧ್ಯಾಹ್ನ 1.36 ಕ್ಕೆ ಅಂತ್ಯಗೊಳ್ಳಲಿದೆ.
ವರ್ಷಾಂತ್ಯಕ್ಕೆ ಎದುರಾಗಿರುವ ಸೂರ್ಯ ಗ್ರಹಣ ಡಿಸೆಂಬರ್ 26 ರಂದು ಗೋಚರಿಸಲಿದೆ. ವರ್ಷಾಂತ್ಯಕ್ಕೆ ಗ್ರಹಣ ಬಂದಿರುವುದರಿಂದ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ ಎನ್ನುವುದು ಜೋತಿಷಿಗಳ ಅಭಿಪ್ರಾಯವಾಗಿದೆ.
ಸೂರ್ಯಗ್ರಹಣದ ಸಂದರ್ಭದಲ್ಲಿ ಜನರು ಯಾವುದೇ ಆಹಾರ ಸೇವನೆ ಮಾಡುವುದಿಲ್ಲ. ಸೂರ್ಯಗ್ರಹಣ ಮುಕ್ತಾಯವಾದ ನಂತರ ಸ್ನಾನ ಮಾಡಿ ಪೂಜೆ ಮಾಡಿದ ನಂತರ ಆಹಾರ ಸೇವಿಸುತ್ತಾರೆ. ಸೂರ್ಯ ಮತ್ತು ಚಂದ್ರನನ್ನು ರಾಹು ಮತ್ತು ಕೇತು ಶತ್ರುಗಳೆಂದು ಭಾವಿಸುವುದರಿಂದ ಯಾವುದೇ ಒಳ್ಳೆಯ ಕಾರ್ಯಗಳನ್ನು ಮಾಡದಿರುವುದು ಸೂಕ್ತ.
ವರ್ಷಾಂತ್ಯಕ್ಕೆ ಎದುರಾಗಿರುವ ಸೂರ್ಯ ಗ್ರಹಣ ಎಂದಿನಂತಿರುವ ಸೂರ್ಯಗ್ರಹಣಗಿಂತ ಭಿನ್ನವಾಗಿರುತ್ತದೆ ಎನ್ನುವುದು ಜೋತಿಷ್ಯ ಶಾಸ್ತ್ರ ಪಂಡಿತರ ನಂಬಿಕೆಯಾಗಿದೆ. ಈ ಗ್ರಹಣದ ವೇಳೆ ಸೂರ್ಯ, ಚಂದ್ರ, ಶನಿ, ಬುಧ, ಗುರು ಹಾಗೂ ಕೇತು ಗ್ರಹಗಳು ಧನು ರಾಶಿಯಲ್ಲಿ ಒಟ್ಟಿಗೆ ಬರಲಿವೆ. ಈ ಗ್ರಹಣವ ಧನು ರಾಶಿ ಮತ್ತು ಮೂಲಾ ನಕ್ಷತ್ರದಲ್ಲಿ ಸಂಭವಿಸಲಿದೆ. 1962 ರಲ್ಲಿ ಇಂತಹ ಸೂರ್ಯಗ್ರಹಣ ಸಂಭವಿಸಿತ್ತು ಎಂದು ಜ್ಯೋತಿಷಿಗಳು ಹೇಳುತ್ತಾರೆ,
ಸೂರ್ಯಗ್ರಹಣವನ್ನು ಬರಿಗಣ್ಣಿನಲ್ಲಿ ವೀಕ್ಷಿಸುವುದು ಸರಿಯಲ್ಲ. ಇದರಿಂದ ಕಣ್ಣುಗಳಿಗೆ ತೊಂದರೆಯಾಗುವ ಸಾಧ್ಯತೆಗಳಿರುತ್ತವೆ. ಗ್ರಹಣವನ್ನು ವೀಕ್ಷಿಸುವಾಗ ಹಿರಿಯರ ಸಲಹೆ ಪಡೆಯುವುದು ಸೂಕ್ತ.
ತಮಿಳುನಾಡಿನಲ್ಲಿ ಸೂರ್ಯಗ್ರಹಣ ಗೋಚರವಾಗುತ್ತಿದ್ದು ಸೂರ್ಯಗ್ರಹಣ ವೀಕ್ಷಿಸಲು ಮಕ್ಕಳು ಆದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಲ್ಲಿ ಸೂಕ್ತ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.