ವಿಟಮಿನ್ ಕೆ ದೇಹಕ್ಕೆ ಯಾಕೆ ಬೇಕು

ನಮ್ಮ ದೇಹ ಆರೋಗ್ಯವಾಗಿರಬೇಕಾದರೆ ಎಲ್ಲಾ ರೀತಿಯ ಪೋಷಕಾಂಶಗಳೂ ಅಗತ್ಯ. ಅದರಲ್ಲಿ ವಿಟಮಿನ್ ಕೆ ಅಂಶವೂ ಅಗತ್ಯ. ಸಾಕಷ್ಟು ಸೊಪ್ಪು ತರಕಾರಿಗಳು, ಮೀನು ಇತ್ಯಾದಿ ಸೇವನೆಯಿಂದ ವಿಟಮಿನ್ ಕೆ ಅಂಶ ಸಿಗುತ್ತದೆ. ಇದು ನಮ್ಮ ದೇಹಕ್ಕೆ ಯಾಕೆ ಅಗತ್ಯ ಎಂದು ನೋಡೋಣ.

credit: social media

ಎಲುಬುಗಳು ಆರೋಗ್ಯವಾಗಿರಬೇಕು, ಗಟ್ಟಿಯಾಗಿರಬೇಕು ಎಂದರೆ ವಿಟಮಿನ್ ಕೆ ಅಗತ್ಯವಾಗಿದೆ

ವಿಟಮಿನ್ ಕೆ ಅಂಶ ದೇಹದಲ್ಲಿ ಹೇರಳವಾಗಿದ್ದರೆ ನಮ್ಮ ಹೃದಯ ಆರೋಗ್ಯವಂತವಾಗಿರುತ್ತದೆ.

ವಿಟಮಿನ್ ಕೆ ನಮ್ಮ ಮೆದುಳನ್ನು ಸಂರಕ್ಷಿಸಿ ಬುದ್ಧಿಮತ್ತೆ ಚುರುಕಾಗಿರುವಂತೆ ನೋಡಿಕೊಳ್ಳುತ್ತದೆ

ದೇಹದಲ್ಲಿ ಯಾವುದೇ ಭಾಗದಲ್ಲಿ ಗಾಯಗಳಾದರೆ ರಕ್ತ ಹೆಪ್ಪುಗಟ್ಟುವಂತೆ ಮಾಡಲು ವಿಟಮಿನ್ ಕೆ ಅಂಶ ಅಗತ್ಯ

ಕಣ್ಣಿನ ಅಡಿಭಾಗ ಕಪ್ಪಾಗುವುದು ಸೇರಿದಂತೆ ಚರ್ಮದ ಸಮಸ್ಯೆ ಪರಿಹರಿಸಲು ವಿಟಮಿನ್ ಕೆ ಅಂಶ ಅಗತ್ಯ

ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುವಂತೆ ಮಾಡಲು ದೇಹದಲ್ಲಿ ವಿಟಮಿನ್ ಕೆ ಅಂಶ ಅತೀ ಅಗತ್ಯ.

ಇದಕ್ಕಾಗಿ ಸೊಪ್ಪು ತರಕಾರಿ, ಮೊಳಕೆ ಕಾಳು, ಮೊಟ್ಟಿ, ಕಿವಿ ಹಣ್ಣಗುಳನ್ನು ಹೇರಳವಾಗಿ ಸೇವಿಸಿ.

ಮಾವಿನ ಹಣ್ಣು ಸೇವನೆಯ ಲಾಭಗಳು

Follow Us on :-