Webdunia - Bharat's app for daily news and videos

Install App

ಯುವತಿಯರ ನಿದ್ರಾಭಂಗಿಯಿಂದಲೇ ಅವರಿಗೆ ಎಂತಹ ಯುವಕ ಇಷ್ಟ ಎನ್ನುವುದು ಗೊತ್ತಾಗುತ್ತೆ..!

Webdunia
ಬುಧವಾರ, 6 ಡಿಸೆಂಬರ್ 2017 (15:57 IST)
ಪ್ರತಿಯೊಬ್ಬರಿಗೆ ತಮ್ಮದೇ ಆದ ಮಲಗುವ ಶೈಲಿಯಿರುತ್ತದೆ. ಕೆಲವರು ನೇರವಾಗಿ ಮಲಗಿದರೆ, ಕೆಲವರು ಬೋರಲಾಗಿ ಮಲಗುತ್ತಾರೆ. ಕೆಲವರು ಮಗ್ಗುಲಿಗೆ ಮಲಗುತ್ತಾರೆ. ನಿಮ್ಮ ನಿದ್ರೆ ಕೇವಲ ಆರಾಮದಾಯಕವಾದ ನಿದ್ರೆಯಾಗಿರುವುದಿಲ್ಲ. ನೀವು ಮಲಗುವ ಶೈಲಿ ಹಲವು ವಿಷಯಗಳನ್ನು ಹೇಳುತ್ತದೆ. ಎಂತಹ ವಿಷಯಗಳೆಂದರೆ ನೀವು ಯಾವ ಪ್ರಕಾರದ ಯುವಕ/ಯುವತಿಯನ್ನು ಇಷ್ಟಪಡುತ್ತೀರಾ ಎನ್ನುವುದನ್ನು ಬಹಿರಂಗಪಡಿಸುತ್ತದೆ. ನೀವು ಮಲಗುವ ಭಂಗಿ ಎಂತಹ ವ್ಯಕ್ತಿಯನ್ನು ಇಷ್ಟುಪಡುತ್ತೀರಿ ಎನ್ನುವುದನ್ನು ಬಹಿರಂಗಪಡಿಸುತ್ತದೆ. 
 
ನೇರವಾಗಿ ಮಲಗುವುದು

 
ಯಾವ ಯುವತಿಯರು ನೇರವಾಗಿ ಮಲಗುತ್ತಾರೆಯೋ ಅವರು ಸಮತೋಲನದ ಗುಣ ಹೊಂದಿರುತ್ತಾರೆ. ವಾಸ್ತವತೆಯನ್ನು ಅರಿಯುವಂತವರಾಗಿದ್ದು, ದೊಡ್ಡ ದೊಡ್ಡ ಕನಸು ಕಾಣುವುದಿಲ್ಲ. ಇಂತಹ ಯುವತಿಯರು ಬುದ್ದಿವಂತ ಯುವಕರತ್ತ ಹೆಚ್ಚು ಆಕರ್ಷಿತರಾಗುತ್ತಾರೆ.

ಬೋರಲಾಗಿ ಮಲಗುವುದು
ಬೋರಲಾಗಿ ಮಲಗುವ ಯುವತಿಯರು ಹೆಚ್ಚು ನಿರ್ಲಕ್ಷ್ಯಧೋರಣೆ ಹೊಂದಿದವರಾಗಿರುತ್ತಾರೆ. ಇಂತಹ ಯುವತಿಯರು ಯಾವುದೇ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಎಲ್ಲಾ ಕೆಲಸಗಳನ್ನು ನಿರ್ಲಕ್ಷ್ಯದಿಂದಲೇ ಮಾಡುತ್ತಾರೆ. ಇದರಿಂದ ನಷ್ಟ ಅನುಭವಿಸುತ್ತಾರೆ. ಇಂತಹ ಯುವತಿಯರು ಬೋರಿಂಗ್ ಯುವಕರನ್ನು ಇಷ್ಟಪಡುವುದಿಲ್ಲ. ಬದಲಿಗೆ ಪದೇ ಪದೇ ಸರ್ಪ್‌ರೈಸ್ ಕೊಡುವ ಯುವಕರು ಇಷ್ಟವಾಗುತ್ತಾರೆ. 

ತಲೆದಿಂಬು ಹಿಡಿದುಕೊಂಡು ಮಲಗುವುದು
ತಲೆದಿಂಬು ಹಿಡಿದುಕೊಂಡು ಮಲಗುವ ಯುವತಿಯರಿಗೆ ಹೆಚ್ಚು ಹೆಚ್ಚು ಪ್ರೀತಿಸುವ ಯುವಕರು ಇಷ್ಟವಾಗುತ್ತಾರೆ. ಇಂತಹ ಯುವತಿಯರು ಚಂಚಲ ಸ್ವಭಾವದವರಾಗಿದ್ದು ತಮ್ಮದೇ ಆದ ಕನಸಿನ ಲೋಕದಲ್ಲಿ ವಿಹರಿಸುತ್ತಾರೆ. 

ಕಾಲುಗಳನ್ನು ಅಗಲಿಸಿ ಮಲಗುವುದು
ಕಾಲುಗಳನ್ನು ಅಗಲಿಸಿ ಮಲಗುವ ಯುವತಿಯರು ತುಂಬಾ ನಿರ್ಲಕ್ಷ್ಯ ಮನೋಭಾವ ಹೊಂದಿರುತ್ತಾರೆ. ಇವರು ಯಾವುದೇ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ತಮ್ಮಂತೆ ಜೀವನ ಎಂಜಾಯ್ ಮಾಡುವ ಯುವಕರನ್ನು ಇಷ್ಟಪಡುತ್ತಾರೆ.

ತಲೆದಿಂಬಿನ ಮೇಲೆ ಕೈಯಿಟ್ಟು ಮಲಗುವುದು
ಕೆಲ ಯುವತಿಯರು ತಮ್ಮ ಕೈಯನ್ನು ತಲೆದಿಂಬಿನ ಮೇಲಿಟ್ಟು ಮಲಗುತ್ತಾರೆ. ಇಂತಹ ಯುವತಿಯರು ಯುವಕರ ಸೌಂದರ್ಯಕ್ಕೆ ಆಕರ್ಷಿತರಾಗುವುದಿಲ್ಲ. ಅವನ ಒಳ್ಳೆಯ ಗುಣಗಳಿಗೆ ಆಕರ್ಷಿತರಾಗುತ್ತಾರೆ. 

ಮಗ್ಗುಲಿಗೆ ಮಲಗುವುದು
ಕೆಲ ಯುವತಿಯರಿಗೆ ಮಗ್ಗುಲಿಗೆ ಮಲಗುವ ಹವ್ಯಾಸವಿರುತ್ತದೆ. ಇಂತಹ ಯುವತಿಯರಿಗೆ ನಾಯಕತ್ವದ ಗುಣಗಳಿರುವ ಯುವಕ ತುಂಬಾ ಇಷ್ಟವಾಗುತ್ತಾನೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments