ಅವಳಿಗೆ ಶಿಕ್ಷಣ ಕೊಡಿಸುವಲ್ಲೂ ನಮ್ಮ ಸಮಾಜ ಹಿಂದುಳಿದುಬಿಟ್ಟಿತ್ತು. ಮುಂದೆ ಮುಂದೆ ಮನೆ ಕೆಲಸದ ಶಾಶ್ವತ ಆಳು ಮತ್ತು ಭೋಗದ ವಸ್ತುವನ್ನಾಗಿ ಮಾಡಿತು. ಪುರುಷ ಪ್ರಧಾನವಾದ ಅವ್ಯವಸ್ಥಿತ ಸಮಾಜ ರೂಪುಗೊಂಡೇ ಬಿಟ್ಟಿತು.
ಮನಸ್ಥಿತಿ ಬದಲಾಗತೊಡಗಿದ್ದು ಯುದ್ಧದಲ್ಲಿ ಕಚ್ಚೆಯುಟ್ಟು ನಾರಿ ಜಯಭೇರಿ ಬಾರಿಸಿದಾಗ. ಚಕ್ರವ್ಯೂಹ ನುಗ್ಗಿ ರಣತಂತ್ರವ ಭೇದಿಸಿದಾಗ, ವಿಜ್ಞಾನ ರಂಗದಲ್ಲಿ ಪುರುಷನ ಹಿಮ್ಮೆಟ್ಟಿಸಿ ಯಾನಾತಿಯಾನಗಳಲ್ಲಿ ಹಿಂತಿರುಗದೆ ಹಾರಿದಾಗ, ಮಗಳಾದರೆ "ಟೆನ್ ಶನ್" ಹೋಗಿ ಮಗಳೆಂದರೆ "ಟೆನ್ ಸನ್" ಗೆ ಸಮ ಅನ್ನುವಲ್ಲಿಗೆ ಬಂದು ನಿಂತಿದೆ.
-ವಾಣಿ ಶೆಟ್ಟಿ